ಕಾರವಾರ:ಕರ್ನಾಟಕ ನೌಕಾ ವಲಯದ ನೂತನ ಧ್ವಜ ಅಧಿಕಾರಿ( ಫ್ಲ್ಯಾಗ್ ಆಫೀಸರ್) ಆಗಿ ರಿಯರ್ ಅಡ್ಮಿರಲ್ ಕೆ.ಎಂ.ರಾಮಕೃಷ್ಣನ್ ಸೋಮವಾರ ಜವಾಬ್ದಾರಿ ವಹಿಸಿಕೊಂಡರು.
ಇಲ್ಲಿನ ಕದಂಬ ನೌಕಾನೆಲೆ ಹಾಗೂ ಸಂಪೂರ್ಣ ಕರ್ನಾಟಕ ವ್ಯಾಪ್ತಿಯ ನೌಕಾ ಕಾರ್ಯಾಚರಣೆಗೆ ಅವರು ಮುಖ್ಯಸ್ಥರಾಗಿರುವರು.
ಇದುವರೆಗೆ ಧ್ವಜ ಅಧಿಕಾರಿಯಾಗಿದ್ದ ಅತುಲ್ ಆನಂದ್ ಅವರು ವೈಸ್ ಅಡ್ಮಿರಲ್ ಆಗಿ ಭಡ್ತಿ ಪಡೆದು ನವದೆಹಲಿಯ ನೌಕಾ ಕಾರ್ಯಾಚರಣೆ ಮುಖ್ಯಸ್ಥರಾಗಿ ನೇಮಕವಾಗಿದ್ದಾರೆ.
ರಾಮಕೃಷ್ಣನ್ ಸ್ಟಡೀಸ್‌ನಲ್ಲಿ ಎಂಎಸ್‌ಸಿ, ಡಿಫೆನ್ಸ್ ಆ್ಯಂಡ್ ಮ್ಯಾನೇಜ್‌ಮೆಂಟ್‌ನಲ್ಲಿ ಎಂಫಿಲ್ ಓದಿದ್ದಾರೆ.
ಅಲ್ಲದೆ, ಅವರು, ಖಡಕ್‌ವಾಸಲ್‌ನ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ, ವಿಲ್ಲಿಂಗ್‌ಟನ್‌ನ ಡಿಫೆನ್ಸ್ ಸರ್ವೀಸ್ ಸ್ಟಾಪ್ ಕಾಲೇಜ್,ಮೊಹೋವ್‌ನ ಆರ್ಮಿ ವಾರ್ ಕಾಲೇಜ್‌ನಲ್ಲಿ ತರಬೇತಿ ಪಡೆದಿದ್ದಾರೆ.
ಇದನ್ನೂ ಓದಿ-ರಥಬೀದಿಯಲ್ಲಿ ಮಾದಕ ದ್ರವ್ಯ ಅಂಗಡಿ!
1991 ರಲ್ಲಿ ಭಾರತೀಯ ನೌಕಾಸೇನೆ ಸೇರಿದ್ದರು. ಐಎನ್‌ಎಸ್ ನಿರ್ಬಿಂಕ್, ಐಎನ್‌ಎಸ್ ಸುಭದ್ರಾ, ಐಎನ್‌ಎಸ್ ಬೇತ್ವಾಗಳಲ್ಲಿ ಕಾರ್ಯನಿರ್ವಹಿಸಿದ್ದರು.
ಮಾತ್ರವಲ್ಲ ಶಾರದಾ, ಕುತ್ಹಾರ್, ರಾಣಾ, ಕೃಷ್ಣಾ, ತಲವಾರ್ ಯುದ್ಧ ಹಡಗುಗಳ ನೌಕಾಯಾನ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.
ಪಶ್ಚಿನ ನೌಕಾ ವಿಭಾಗದಲ್ಲಿ ಅವರು ಸಿಬ್ಬಂದಿ ನೇಮಕಾತಿ, ಯೋಜನೆ, ಕಾರ್ಯನಿರ್ವಹಣೆ ಮುಂತಾದ ವಿಭಾಗಗಳ ಕಮಾಂಡರ್ ಆಗಿ ಕಾರ್ಯನಿರ್ವಹಿಸಿದ್ದರು.
ಮಾತ್ರವಲ್ಲ ಪೂರ್ವ ನೌಕಾ ವಿಭಾಗದ ಸೇನಾ ನೌಕಾಯನಾನ ಅಧಿಕಾರಿಯಾಗಿಯೂ ಕಾರ್ಯನಿರ್ವಹಿಸಿದ್ದರು.
ನೌಕಾಸೇನೆಯ ವಿಶಿಷ್ಟ ಸೇವಾ ಪದಕ ಪಡೆದಿರುವ ಅವರು ಇದುವರೆಗೆ ನವದೆಹಲಿಯ ನೌಕಾಸೇನೆಯ ಮುಖ್ಯ ಕಚೇರಿಯಲ್ಲಿ ನೌಕಾ ನೌಕರರ ವಿಭಾಗದ ಸಹಾಯಕ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಸೋಮವಾರ ಕಾರವಾರದಲ್ಲಿ ಅಽಕಾರ ಸ್ವೀಕರಿಸಿದ ಅವರು ಹಿರಿಯ ಅಧಿಕಾರಿಗಳನ್ನು ಭೇಟಿಯಾದರು. ನಂತರ ಸೇನೆಯಿಂದ ಗೌರವ ವಂದನೆ ಸ್ವೀಕರಿಸಿದರು. https://twitter.com/IN_KTKNA/status/1645379695943503875?t=l1JeHacJx5dW8AM6eqq5JA&s=08https://twitter.com/IN_KTKNA/status/1645379695943503875?t=l1JeHacJx5dW8AM6eqq5JA&s=08