ಜಿಲ್ಲೆ

ರಾಧಿಕಾಗೆ ನುಂಗಲಾರದ ತುತ್ತಾದ 3 ವಿಷಯಗಳಿವು: ಈ ಆಯಾಮದಲ್ಲೇ ನಡೆಯುತ್ತಿದೆ ಸಿಸಿಬಿ ವಿಚಾರಣೆ!?

ಬೆಂಗಳೂರು: ಮಹಾ ವಂಚಕ ಯುವರಾಜ್​ ಖಾತೆಯಿಂದ ನಟಿ ರಾಧಿಕಾ ಕುಮಾರಸ್ವಾಮಿ ಖಾತೆಗೆ ಹಣ ವರ್ಗಾವಣೆ ಪ್ರಕರಣ ಸಂಬಂಧ ಸಿಸಿಬಿ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿರುವ ನಟಿ ರಾಧಿಕಾಗೆ ಪ್ರಮುಖ ಮೂರು ವಿಷಯಗಳು ಕಂಟಕವಾಗಿ ಪರಿಣಮಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ

ನಟಿ ರಾಧಿಕಾಗೆ ನುಂಗಲಾರದ ತುತ್ತಾಗಿರುವ ಮೂರು ವಿಚಾರಗಳೆಂದರೆ, ಮೊದಲನೆಯದು ಆಡಿಯೋ ಕ್ಲಿಪ್, ನಂತರ ಹಣದ ವರ್ಗಾವಣೆ ಮತ್ತು ಅಗ್ರಿಮೆಂಟ್. ಈ ಮೂರು ಆಯಾಮಗಳಲ್ಲೇ ರಾಧಿಕಾರ ವಿಚಾರಣೆ ನಡೆಯುತ್ತಿರುವುದಾಗಿ ತಿಳಿದುಬಂದಿದೆ.

ಆಡಿಯೋ ಕ್ಲಿಪ್ ಕುರಿತು ತನಿಖೆ ನಡೆಯುತ್ತಿರುವಾಗಲೇ ಇನ್ನೇರಡು ವಿಚಾರ ಕುರಿತು ಖುದ್ದು ರಾಧಿಕಾರೇ ಬಾಯ್ಬಿಟ್ಟಿದ್ದರು. ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡುವ ಭರದಲ್ಲಿ ರಾಧಿಕಾ ಮಹಾನ್ ಎಡವಟ್ಟು ಮಾಡಿಕೊಂಡರಾ? ಎಂಬ ಪ್ರಶ್ನೆ ಮೂಡತೊಡಗಿದೆ. ಏಕೆಂದರೆ, ಸಿಸಿಬಿ ಹುಡುಕುತ್ತಿದ್ದುದ್ದನ್ನೇ ರಾಧಿಕಾ ಸುದ್ದಿಗೋಷ್ಠಿಯಲ್ಲಿ ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ.

ಸುದ್ದಿಗೋಷ್ಟಿಯಲ್ಲಿ ಖುದ್ದು ಹಣದ ವರ್ಗಾವಣೆ ಮತ್ತು ಅಗ್ರಿಮೆಂಟ್ ಬಗ್ಗೆ ರಾಧಿಕಾ ಹೇಳಿಕೆ ನೀಡಿದ್ದರು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸಿಸಿಬಿ ನೋಟಿಸ್ ನೀಡಿದೆ ಎಂದು ಹೇಳಲಾಗಿದೆ. ಈ ಮೂರು ವಿಚಾರಕ್ಕೆ ಸಂಬಂಧಿಸಿದ ಸಾಕ್ಷ್ಯಾಧರ ಸಹ ಸಿಸಿಬಿ ಬಳಿ ಇದೆ ಎನ್ನಲಾಗಿದೆ. ಇದರ ಆಧಾರದಲ್ಲಿಯೇ ರಾಧಿಕಾ ವಿಚಾರಣೆ ನಡೆಯುತ್ತಿದ್ದು, ಅಪ್ಪಿ-ತಪ್ಪಿ ವಿಚಾರಣೆಯಲ್ಲಿ ಎಡವಟ್ಟು ಮಾಡಿಕೊಂಡ್ರೆ ರಾಧಿಕಾ ಇದೇ ಕೇಸ್ ನಲ್ಲಿ ಲಾಕ್ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. (ದಿಗ್ವಿಜಯ ನ್ಯೂಸ್​)