ಜಿಲ್ಲೆ

ಕುಟುಂಬ ಸಮೇತ ಹಂಪಿಗೆ ಭೇಟಿ ನೀಡಿದ ಹಿಂದು ಧಾರ್ಮಿಕ ದತ್ತಿ ಇಲಾಖೆ ಆಯುಕ್ತೆ ರೋಹಿಣಿ ಸಿಂಧೂರಿ

ವಿಜಯನಗರ: ಹಿಂದು ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತೆ ರೋಹಿಣಿ ಸಿಂಧೂರಿ ಅವರು ಶನಿವಾರ ಕುಟುಂಬ ಸಮೇತ ಹಂಪಿಯ ಶ್ರೀ ವಿರೂಪಾಕ್ಷೇಶ್ವರ ದೇಗುಲಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ಹಂಪಿಯ ಶ್ರೀ ಪಂಪಾಂಬಿಕೆದೇವಿ, ಶ್ರೀ ಭುವನೇಶ್ವರಿ ದೇವಿ ದರ್ಶನ ಮಾಡಿದ ಅವರು, ಕಡಲೆಕಾಳು, ಸಾಸಿವೆ ಕಾಳು ಗಣಪ ಮಂಟಪಗಳಿಗೆ ಭೇಟಿ ನೀಡಿದರು. ನಂತರ ಉಗ್ರ ನರಸಿಂಹ, ಉದ್ದಾನ ವೀರಭದ್ರೇಶ್ವರ ದೇಗುಲ, ಶ್ರೀಕೃಷ್ಣ ದೇಗುಲಕ್ಕೂ ಭೇಟಿ ನೀಡಿದರು.

ಕಮಲ ಮಹಲ್, ಆನೆಲಾಯ, ಹಜಾರ ರಾಮ ದೇಗುಲ, ಮಹಾನವಮಿ ದಿಬ್ಬ, ವಿಜಯ ವಿಠ್ಠಲ ದೇಗುಲ ಮತ್ತು ಕಲ್ಲಿನ ತೇರು ಸ್ಮಾರಕಗಳಿಗೆ ಭೇಟಿ ನೀಡಿದರು. ಮುಜರಾಯಿ ಇಲಾಖೆಯ ಅಧಿಕಾರಿ ಎಂ.ಎಚ್. ಪ್ರಕಾಶರಾವ್ ಮತ್ತಿತರರು ಸಾಥ್​ ನೀಡಿದರು.