ಜಿಲ್ಲೆ

ರಾಷ್ಟ್ರಗೀತೆ ಆರಂಭವಾದ್ರೂ ಹಸ್ತಲಾಘವ ಮಾಡುವುದರಲ್ಲಿ ರಾಜ್ಯಪಾಲರು ಬಿಜಿ: ವಿಡಿಯೋ ವೈರಲ್​

ಆನೇಕಲ್: ರಾಷ್ಟ್ರಗೀತೆ ಆರಂಭವಾದರೂ ಅದನ್ನು ಗಮನಿಸದೇ ಗಣ್ಯರ ಜತೆ ಹಸ್ತಲಾಘವ ಮಾಡುವುದರಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ನಿರತರಾಗಿದ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ರಾಜ್ಯಪಾಲ ಥಾವರ್​ ಚಂದ್ ಅವರಿಂದ ಈ ಅಚಾತುರ್ಯ ನಡೆದಿದೆ. ರಾಷ್ಟ್ರಗೀತೆ ಪ್ರಾರಂಭ ಆಗಿರುವುದರ ಬಗ್ಗೆ ಪೊಲೀಸ್ ಅಧಿಕಾರಿ ಎಚ್ಚರಿಕೆ ನೀಡಿದ ಬಳಿಕ ರಾಜ್ಯಪಾಲರಿಗೆ ಅರಿವಾಗಿ ಗೌರವ ಸೂಚಿಸಿದರು.

ಆನೇಕಲ್ ತಾಲೂಕಿನ‌ ಜಿಗಣಿ ಹೊರವಲಯದ ಶಾಂತಿ ಕುಟೀರದಲ್ಲಿ ಈ ಘಟನೆ ನಡೆದಿದೆ. ಕಾರ್ಯಕ್ರಮ ಪ್ರಯುಕ್ತ ಮುಖ್ಯ ಅತಿಥಿಯಾಗಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಗವಹಸಿದ್ದರು. ರಾಷ್ಟ್ರಗೀತೆ ಹಾಡುವ ವೇಳೆಯೇ ವೇದಿಕೆ ಮೇಲೆ ಗಣ್ಯರ ಜತೆ ಹಸ್ತಲಾಘವ ಮಾಡಿದರು. (ದಿಗ್ವಿಜಯ ನ್ಯೂಸ್​)