ಬೆಂಗಳೂರು: ಸಾರ್ವಜನಿಕರ ದೂರಿನ ಮೇಲೆ ಬೀದಿ ತರಕಾರಿ ವ್ಯಾಪಾರಿಗಳು ಬಳಸುತ್ತಿದ್ದ ಮೈಕುಗಳನ್ನು ಪೂರ್ವ ವಿಭಾಗದ ಪೊಲೀಸರು ಜಪ್ತಿ ಮಾಡಿದ್ದಾರೆ.
ತರಕಾರಿ, ಪಾತ್ರೆ, ಬಟ್ಟೆ ವ್ಯಾಪಾರಕ್ಕೆ ಆಟೋ, ಸ್ಕೂಟರ್ ನಲ್ಲಿ ಬರುತ್ತಿದ್ದ ವ್ಯಾಪಾರಿಗಳು ಮೈಕ್ ಬಳಸುತ್ತಿದ್ದರು. ಇದರಿಂದ ಮಕ್ಕಳ ಆನ್ಲೈನ್ ಕ್ಲಾಸ್ ಮತ್ತು ವೃದ್ಧರ ಮೇಲೆ ದುಷ್ಪರಿಣಾಮ ಬೀರುತ್ತಿತ್ತು. ಈ ಬಗ್ಗೆ ಸಾರ್ವಜನಿಕರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೂರ್ವ ವಿಭಾಗದ ಪೊಲೀಸರು ಕಾರ್ಯಾಚರಣೆ ನಡೆಸಿ ವ್ಯಾಪಾರಿಗಳು ವಾಹನಗಳಿಗೆ ಅಳವಡಿಸಿದ್ದ ಮೈಕ್ ಜಪ್ತಿ ಮಾಡಿದ್ದಾರೆ.