ಜಿಲ್ಲೆ

ಸ್ನೇಹಿತರ ಜೊತೆ ಈಜಲು ಹೋಗಿದ್ದ ಯುವವೈದ್ಯ ನಾಪತ್ತೆ: ಕನಕಪುರದಲ್ಲಿ ಘಟನೆ, ಮೃತಪಟ್ಟಿರುವ ಶಂಕೆ

ರಾಮನಗರ: ಸ್ನೇಹಿತರ ಜೊತೆ ಈಜಲು ಹೋಗಿದ್ದ ವೈದ್ಯ ನಾಪತ್ತೆಯಾಗಿರುವ ಘಟನೆ ಕನಕಪುರದ ಮಾವತ್ತೂರು ಕೆರೆಯಲ್ಲಿ ನಡೆದಿದೆ.

ಸಚಿನ್ ಕುಮಾರ್(26) ನಾಪತ್ತೆಯಾದ ವೈದ್ಯ. ಕನಕಪುರದ ದಯಾನಂದ ಸಾಗರ ಮೆಡಿಕಲ್ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಚಿನ್​, ನಿನ್ನೆ (ಸೆ.13) ಸಂಜೆ ಸ್ನೇಹಿತರ ಜೊತೆಗೆ ಕೆರೆ ಬಳಿ ತೆರಳಿದ್ದರು. ಈ ವೇಳೆ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

ಸ್ನೇಹಿತರಿಂದ ಬಂದ ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ, ಕೆರೆಯಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಕನಕಪುರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)