ಜಿಲ್ಲೆ

ನುಡಿದಂತೆ ನಡೆದ ಸಂಸದೆ ಸುಮಲತಾ ಅಂಬರೀಶ್​ಗೆ ಸಾರ್ವಜನಿಕರಿಂದ ಪ್ರಶಂಸೆ ​

ಮಂಡ್ಯ: ಆಕ್ಸಿಜನ್​ ಅಭಾವ ತಪ್ಪಿಸಲು ಸಂಸದೆ ಸುಮಲತಾ ಅಂಬರೀಶ್​ ನೆರವು ನೀಡುವ ಮೂಲದ ನುಡಿದಂತೆ ನಡೆದಿದ್ದಾರೆ.

ಸುಮಾರು 2000 ಲೀ. ಸಾಮರ್ಥ್ಯದ 20 ಜಂಬೋ‌ ಸಿಲಿಂಡರ್ ಅನ್ನು ಜಿಲ್ಲಾಡಳಿತದ ಮೂಲಕ ಮದ್ದೂರಿನ ಗುರುಶಾಂತಪ್ಪ ಆಸ್ಪತ್ರೆಗೆ ಸುಮಲತಾ ಅವರು ಕಳುಹಿಸಿಕೊಟ್ಟಿದ್ದಾರೆ.

ಪ್ರತಿ ದಿನ ಸ್ವಂತ ಹಣದಲ್ಲಿ ಮಂಡ್ಯ ಜಿಲ್ಲೆಗೆ 2000 ಲೀ. ಆಕ್ಸಿಜನ್​ ನೀಡುವುದಾಗಿ ಸುಮಲತಾ ಭರವಸೆ ನೀಡಿದ್ದರು. ಕೊವಿಡ್ ನಿರ್ವಹಣೆ ಸಂಬಂಧ ನಡೆದ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಆಕ್ಸಿಜನ್ ಕೊಡಿಸುವುದಾಗಿ ಹೇಳಿದ್ದರು.

ಎಂಪಿ ಫಂಡ್ ಇಲ್ಲದ ಕಾರಣ ಸ್ವಂತ ಹಣದಲ್ಲಿ ನಿತ್ಯ 2000ಲೀ ಆಕ್ಸಿಜನ್ ಕೊಡುವುದಾಗಿ ವಾಗ್ದಾನ ಮಾಡಿದ್ದರು. ಕೊಟ್ಟ ಮಾತಿನಂತೆ 2000 ಲೀ ಸಾಮರ್ಥ್ಯದ 20 ಜಂಬೋ‌ ಸಿಲಿಂಡರ್ ಕಳುಹಿಸಿಕೊಟ್ಟಿದ್ದು, ಸಂಸದೆಯ ಕಾರ್ಯಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.

ಚಾಮರಾಜನಗರದಲ್ಲಿ ನಡೆದ ದುರಂತ ಘಟನೆಯ ಬಳಿಕ ಎಲ್ಲ ಜಿಲ್ಲಾಡಳಿತ ಇದೀಗ ಎಚ್ಚೆತ್ತುಕೊಂಡಿದ್ದು, ಆಕ್ಸಿಜನ್​ ಪೂರೈಕೆಗೆ ಒತ್ತು ನೀಡಿದೆ. ನಟ ಸುದೀಪ್​ ಮೂಲಕ ಆಕ್ಸಿಜನ್​ ಕೊರತೆ ಇರುವ ವಿವಿಧ ಆಸ್ಪತ್ರೆಗಳಿಗೆ ತಮ್ಮ ಚಾರಿಟಬಲ್ ಸೊಸೈಟಿ ಮೂಲಕ ಆಕ್ಸಿಜನ್​ ಕಳುಹಿಸಿಕೊಡುವ ಪ್ರಯತ್ನ ಮಾಡುತ್ತಿದ್ದಾರೆ. (ದಿಗ್ವಿಜಯ ನ್ಯೂಸ್​)