ಜಿಲ್ಲೆ

ಲಾಕ್‌ಡೌನ್ ವೇಳೆಯೂ ಸ್ಪಾ ಸುತ್ತಲೂ ವಾಹನ ಸಂಚಾರ: ದಾಳಿ ಮಾಡಿದ ಪೊಲೀಸರಿಗೆ ಕಾದಿತ್ತು ಶಾಕ್​!

ಮೈಸೂರು: ಮಹಾಮಾರಿ ಕರೊನಾ ಸಂಕಷ್ಟದ ನಡುವೆಯೂ ಸ್ಪಾ ಹೆಸರಿನಲ್ಲಿ ಮಸಾಜ್​ ಮತ್ತು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಕಿಡಿಗೇಡಿಗಳ ಅಡ್ಡೆ ಮೇಲೆ ವಿಜಯನಗರ ಪೊಲೀಸರು ದಾಳಿ ಮಾಡಿದ್ದಾರೆ.

ದಂಧೆ ನಡೆಸುತ್ತಿದ್ದ ಮಹಿಳೆ ಹಾಗೂ ಪ್ರಜ್ವಲ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ, ಮನೆ ಬಾಡಿಗೆಗೆ ಕೊಟ್ಟಿದ್ದ ಮಾಲೀಕರ ಮೇಲೂ ಪ್ರಕರಣ ದಾಖಲಿಸಲಾಗಿದೆ.

ಲ್ಯಾವೆಂಡರ್ ಯ್ಯೂನಿಸೆಕ್ಸ್ ಬ್ಯೂಟಿ ಸ್ಪಾ ಮತ್ತು ಸಲೂನ್ ಹೆಸರಿನಲ್ಲಿ ಕಿಡಿಗೇಡಿಗಳು ದಂಧೆ ನಡೆಸುತ್ತಿದ್ದರು. ಆನ್‌ಲೈನ್‌ನಲ್ಲೇ ಪುರುಷರನ್ನು ಸಂಪರ್ಕಿಸುತ್ತಿದ್ದ ಆರೋಪಿಗಳು, ಆನ್‌ಲೈನ್‌‌ನಲ್ಲೇ ಸಮಯ ನಿಗದಿ ಮಾಡಿ ಸ್ಥಳಕ್ಕೆ ಕರೆಸಿಕೊಂಡು ಯುವತಿಯರಿಂದ ಮಸಾಜ್ ಮಾಡಿಸುತ್ತಿದ್ದರು. ಇದರೊಂದಿಗೆ ಬೇರೆ ಚಟುವಟಿಕೆಗಳು ಸಹ ನಡೆಯುತ್ತಿದ್ದವು.

ಆತಂಕಕಾರಿ ವಿಚಾರವೆಂದರೆ ಲಾಕ್‌ಡೌನ್ ವೇಳೆಯೂ ಸ್ಪಾ ಸುತ್ತಲೂ ವಾಹನಗಳು ಸಂಚರಿಸುತ್ತಿದ್ದವು. ಈ ವೇಳೆ ಗಸ್ತಿನಲ್ಲಿದ್ದ ಹೆಡ್‌ಕಾನ್ಸ್​ಟೇಬಲ್​ ಸೋಮಾರಾಧ್ಯ ಎಂಬುವರು ಪರಿಶೀಲನೆ ನಡೆಸಿದ ಬಳಿಕ ತಮ್ಮ ತಂಡದೊಂದಿಗೆ ದಾಳಿ ನಡೆಸಿದಾಗ ಕಿಡಿಗೇಡಿಗಳ ದಂಧೆ ಬಯಲಾಗಿದೆ.

ಘಟನಾ ಸ್ಥಳಕ್ಕೆ ಡಿಸಿಪಿ ಡಾ.ಎ.ಎನ್.ಪ್ರಕಾಶ್ ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.