ಜಿಲ್ಲೆ

ಕೃಷಿ ಅಧ್ಯಯನಕ್ಕೆಂದು ಫಾರ್ಮ್ ಹೌಸ್​ಗೆ ಬಂದಿದ್ದ ಯುವತಿಗಾಗಿ ಕಾದು ಕುಳಿತಿದ್ದ ಜವರಾಯ..!

ಮಂಗಳೂರು: ಕೃಷಿ ಅಧ್ಯಯನಕ್ಕಾಗಿ ಫಾರ್ಮ್ ಹೌಸ್​ಗೆ ಹೋಗಿದ್ದ ಯುವತಿಯೊಬ್ಬಳು ದುರಂತ ಸಾವಿಗೀಡಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕೇಪು ಗ್ರಾಮದಲ್ಲಿ ನಡೆದಿದೆ.

ಡಾ.ಮೈಜೀ ಕರೋಲ್ ಫರ್ನಾಂಡೀಸ್ (31) ಮೃತ ಯುವತಿ. ಫಾರ್ಮ್ ಹೌಸ್​ನ ಹೊಂಡದಲ್ಲಿ ಈಜಲು ಹೋಗಿ ಮುಳುಗಿ ಮೃತಪಟ್ಟಿದ್ದಾರೆ. ಕೃಷಿ ಅಧ್ಯಯನಕ್ಕೆಂದು ಕೇಪು ಗ್ರಾಮದ ವಾರಾಣಸಿ ಫಾರ್ಮ್ ಹೌಸ್​ಗೆ ಮೈಜಿ ಆಗಮಿಸಿದ್ದರು.

ಈ ವೇಳೆ ಫಾರ್ಮ್​ ಹೌಸ್​ನಲ್ಲಿ ನೀರಿನ ಹೊಂಡ ನೋಡಿದ ಮೈಜೀಗೆ ಈಜಲು ಮನಸಾಗಿದೆ. ತಕ್ಷಣ ಸ್ವಿಮ್ಮಿಂಗ್​ ಡ್ರೆಸ್​ ಧರಿಸಿ ಆಸೆಯಿಂದ ನೀರಿಗೆ ಇಳಿದಿದ್ದಾಳೆ. ದುರಾದೃಷ್ಟವಶಾತ್​ ಅದೇ ನೀರಿನಲ್ಲೇ ಮುಳುಗಿ ದುರಂತ ಅಂತ್ಯಕಂಡಿದ್ದಾರೆ.

ಮೃತ ಮೈಜೀ ಮಂಗಳೂರಿನ ಪ್ರಶಾಂತನಗರ ನಿವಾಸಿ. ಮಾಹಿತಿ ತಿಳಿದ ತಕ್ಷಣ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿರುವ ವಿಟ್ಲ ಠಾಣಾ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. (ದಿಗ್ವಿಜಯ ನ್ಯೂಸ್​)