ಜಿಲ್ಲೆ

ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವ: ಆ. 15ರ ಬೃಹತ್ ನಡಿಗೆ ಕಾರ್ಯಕ್ರಮಕ್ಕೆ ಕಾಂಗ್ರೆಸ್​ನಿಂದ ಸಕಲ ಸಿದ್ಧತೆ

ಬೆಂಗಳೂರು: 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಇದೇ ಆಗಸ್ಟ್ 15 ರಂದು ಕಾಂಗ್ರೆಸ್ ಬೃಹತ್ ನಡಿಗೆ ಕಾರ್ಯಕ್ರಮ ಹಮ್ಮಿಕೊಂಡಿದೆ.

ಸ್ವತಂತ್ರ ಭಾರತದ ಬೃಹತ್ ನಡಿಗೆ ಕಾರ್ಯಕ್ರಮವು ಆಗಸ್ಟ್ 15 ರ ಮಧ್ಯಾಹ್ನ 2 ಗಂಟೆಗೆ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಆರಂಭವಾಗಲಿದ್ದು, ನಂತರ ಕೆ.ಆರ್ ವೃತ್ತ, ಟೌನ್ ಹಾಲ್, ಮಿನರ್ವ ವೃತ್ತದ ಮೂಲಕ ಸಾಗಿ ನ್ಯಾಷನಲ್ ಕಾಲೇಜಿನ ವರೆಗೂ ನಡಿಗೆ ಸಾಗಲಿದೆ. ಇದಕ್ಕಾಗಿ ಪಕ್ಷದ ಕಾರ್ಯಕರ್ತರು ಸಾಕಷ್ಟು ತಯಾರಿ ನಡೆಸುತ್ತಿದ್ದಾರೆ.

'ಭಾರತದ ಸ್ವಾತಂತ್ರ್ಯದ 75 ನೇ ಸಂಭ್ರಮವನ್ನು ಇತಿಹಾಸದ ಪುಟದಲ್ಲಿ ಉಳಿಯುವಂತೆ ಮಾಡೋಣ. ನಿಮ್ಮ ನಡಿಗೆ ಇತಿಹಾಸಕ್ಕೆ ಒಂದು ಕೊಡುಗೆ. ಬನ್ನಿ ಒಟ್ಟಾಗಿ ಹೆಜ್ಜೆ ಹಾಕೋಣ' ಎಂದು ಪಕ್ಷದ ಎಲ್ಲಾ ಸದಸ್ಯರು ಕರೆ ನೀಡುತ್ತಿದ್ದಾರೆ.