ಜಿಲ್ಲೆ

ಪುಟ್​ಪಾತ್​ ಮೇಲಿದ್ದ ಕಂಬಕ್ಕೆ ಡಿಕ್ಕಿ: ಭೀಕರ ಅಪಘಾತಕ್ಕೆ 3 ಯುವತಿಯರು ಸೇರಿ 7 ಮಂದಿಯ ದುರಂತ ಅಂತ್ಯ

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ತಡರಾತ್ರಿ ಭೀಕರ ಕಾರು ಅಪಘಾತ ಸಂಭವಿಸಿದ್ದು, 7 ಮಂದಿ ದಾರುಣವಾಗಿ ಮೃತಪಟ್ಟಿದ್ದಾರೆ. ಈ ಘಟನೆ ಕೋರಮಂಗಲದ ಮಂಗಳ ಕಲ್ಯಾಣ ಮಂಟಪದ ಬಳಿ ರಾತ್ರಿ 1.30ರ ಸುಮಾರಿಗೆ ನಡೆದಿದೆ.

ವೇಗವಾಗಿ ಬಂದ ಆಡಿ ಕ್ಯೂ 3 ಕಾರು ಚಾಲಕನ ನಿಯಂತ್ರಣ ತಪ್ಪಿ ಫುಟ್ ಪಾತ್ ಮೇಲಿದ್ದ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ 7 ಮಂದಿ ದುರಂತ ಅಂತ್ಯ ಕಂಡಿದ್ದಾರೆ. ಮೃತಪಟ್ಟವರಲ್ಲಿ ಮೂವರು ಮಹಿಳೆಯರು ಹಾಗೂ ನಾಲ್ಕು ಪುರುಷರಾಗಿದ್ದಾರೆ.

ಮೃತರನ್ನು ದಂಪತಿಯಾದ ಕರುಣಾಸಾಗರ ಹಾಗೂ ಬಿಂದು (28), ಇಶಿತಾ (21), ಡಾ.ಧನುಶಾ (21) ಅಕ್ಷಯ್ ಗೋಯಲ್, ಉತ್ಸವ್ ಮತ್ತು ರೋಹಿತ್ (23) ಎಂದು ಗುರುತಿಸಲಾಗಿದೆ. 6 ಜನ ಸ್ಥಳದಲ್ಲಿ ಮೃತಪಟ್ಟಿದ್ದಾರೆ, ಓರ್ವ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

ಕಾರಿನ ಮುಂಬದಿ ಸೀಟಿನಲ್ಲಿ ಮೂವರು ಹಾಗೂ ಹಿಂಬದಿಯಲ್ಲಿ ನಾಲ್ವರು ಕುಳಿತಿದ್ದರು‌. ಎಲ್ಲರೂ ಕೂಡ 25-30ರ ವಯೋಮಾನದವರು ಮತ್ತು ಸ್ನೇಹಿತರು. ಮೃತ ಅಕ್ಷಯ್ ಗೋಯಲ್ ಕೇರಳಾ ಮೂಲದವನು, ಉತ್ಸವ್ (ಹರ್ಯಾಣ), ರೋಹಿತ್ (ಹುಬ್ಬಳ್ಳಿ), ಕರುಣಾ ಸಾಗರ್ (ಹೊಸೂರು) ಹಾಗೂ ಉಳಿದವರು ಕೋರಮಂಗಲದ ಜೋಲೋ ಸ್ಟ ಪಿಜಿಯಲ್ಲಿ ವಾಸವಿದ್ರು.

ಅಪಘಾತದ ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿ ಆಡುಗೋಡಿ ಸಂಚಾರಿ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್​)