ಜಿಲ್ಲೆ

ಶಿವಾಜಿ ಜಯಂತಿಯಂದು ಖಡ್ಗ‌ ಹಿಡಿದು ನಿಷೇಧಾಜ್ಞೆ ಪ್ರದೇಶದಲ್ಲಿ ಬೈಕ್ ರ್‍ಯಾಲಿ: 8 ಯುವಕರ ವಿರುದ್ಧ FIR ದಾಖಲು

ಬಳ್ಳಾರಿ: ನಿನ್ನೆ (ಫೆ.19) ಶಿವಾಜಿ ಜಯಂತಿ ಹಿನ್ನೆಲೆಯಲ್ಲಿ ಖಡ್ಗ‌ ಹಿಡಿದು ನಿಷೇಧಾಜ್ಞೆ ಇರುವ ಪ್ರದೇಶದಲ್ಲಿ ಬೈಕ್ ರ್‍ಯಾಲಿ ಮಾಡಿದ ಯುವಕರ ವಿರುದ್ಧ ಪ್ರಕರಣ ದಾಖಲಾಗಿದೆ.

ಬಳ್ಳಾರಿಯ ಸರಳಾದೇವಿ ಕಾಲೇಜು ಮುಂಭಾಗ 20 ಕ್ಕೂ ಹೆಚ್ಚು ಬೈಕ್​ಗಳಲ್ಲಿ ಬಂದು ಯುವಕರು ರ್‍ಯಾಲಿ ಮಾಡಿದ್ದರು. ಸದ್ಯ ಸರಳಾದೇವಿ ಕಾಲೇಜು ಬಳ್ಳಾರಿಯಲ್ಲಿ ಹಿಜಾಬ್ ವಿವಾದದ ಕೇಂದ್ರವಾಗಿದೆ. ಹೀಗಾಗಿ ಜಿಲ್ಲಾಡಳಿತ ಕಾಲೇಜಿನ ಸುತ್ತ 200 ಮೀಟರ್ ನಿಷೇಧಾಜ್ಞೆ ಜಾರಿ ಮಾಡಿದೆ.

ನಿಷೇಧಾಜ್ಞೆ ನಡುವೆಯೂ ಬೈಕ್ ರ್‍ಯಾಲಿ ಗಾದಿಲಿಂಗ, ಬಾಲಾಜಿ, ವಿನಯ್, ಸೂರಿ, ರಾಹುಲ, ಸಂತೋಷ್, ಶಿವರಾಂ ಮತ್ತು ಶ್ರೀಧರ್ ವಿರುದ್ಧ ಐಪಿಸಿ 153 ಸೆಕ್ಷನ್ ಅಡಿಯಲ್ಲಿ ಬಳ್ಳಾರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮುಂದಿನ ಕ್ರಮ ಹಾಗೂ ಹೆಚ್ಚಿನ ತನಿಖೆಗೆ ಗಾಂಧಿ ನಗರ ಠಾಣೆಯ ಇನ್ಸ್​ಪೆಕ್ಟರ್​ಗೆ ಪೊಲೀಸ್​ ವರಿಷ್ಠಾಧಿಕಾರಿ ಸೈದುಲ್ ಅದಾವತ್ ಸೂಚನೆ ನೀಡಿದ್ದಾರೆ. (ದಿಗ್ವಿಜಯ ನ್ಯೂಸ್​)