More

    ಊಟದ ಬಿಲ್ ದಿನಕ್ಕೆ 60 ಸಾವಿರ ರೂಪಾಯಿ!

    ಬೆಂಗಳೂರು: ಈಶ್ವರಪ್ಪ ವಿರುದ್ಧ ಕಾಂಗ್ರೆಸ್ ನಡೆಸಿರುವ ಪ್ರತಿಭಟನೆಗೆ ಸರ್ಕಾರದಿಂದ ದಿನಕ್ಕೆ ಸುಮಾರು 60 ಸಾವಿರ ರೂ. ಊಟ ಹಾಗೂ ತಿಂಡಿಗಾಗಿ ಖರ್ಚಾಗುತ್ತಿದೆ. ವಿಧಾನಸಭೆಯಲ್ಲಿ ಸಚಿವಾಲಯದಿಂದಲೇ ಊಟ ಹಾಗೂ ತಿಂಡಿಯನ್ನು ಸರಬರಾಜು ಮಾಡಲಾಗುತ್ತಿದೆ. ಆದರೆ ವಿಧಾನ ಪರಿಷತ್​ನಲ್ಲಿ ಮಾತ್ರ ಧರಣಿನಿರತ ಕಾಂಗ್ರೆಸ್ ಸದಸ್ಯರೇ

    ವೆಚ್ಚ ಭರಿಸುತ್ತಿದ್ದಾರೆ. ಕಲಾಪ ನಡೆಸಲು ಎರಡು ಸದನದಿಂದ ಸದಸ್ಯರ ಭತ್ಯೆ, ಪ್ರಯಾಣ ಭತ್ಯೆ, ಸಿಬ್ಬಂದಿಯ ಹಾಗೂ ಪೊಲೀಸರ ವಿಶೇಷ ಭತ್ಯೆ, ವಿದ್ಯುತ್, ಸ್ಟೇಷನರಿ, ನೀರು, ವಾಹನಗಳಿಗೆ ಇಂಧನ ಸೇರಿ ಸುಮಾರು ಒಂದು ಕೋಟಿ ರೂ.ಗಳಷ್ಟು ವೆಚ್ಚವಾಗುತ್ತದೆ.

    ಕಾಂಗ್ರೆಸ್ ಸದಸ್ಯರು ಊಟ ಹಾಗೂ ತಿಂಡಿಗೆ ಬೇಡಿಕೆ ಇಟ್ಟಿರಲಿಲ್ಲ. ಆದರೆ ಸಭಾಧ್ಯಕ್ಷರೇ ಮುಂದಾಗಿ ಸಚಿವಾಲಯದಿಂದ ವ್ಯವಸ್ಥೆ ಮಾಡಿದ್ದಾರೆ. ಕಾಂಗ್ರೆಸ್​ನ 71 ಸದಸ್ಯರಿದ್ದಾರೆ. ಭದ್ರತೆಗೆ 15 ಪೊಲೀಸರನ್ನು ನೇಮಕ ಮಾಡಲಾಗಿದೆ. ಜತೆಗೆ ಡಿ ಗ್ರೂಪ್ ಹಾಗೂ ಕಸ ಗುಡಿಸುವ 20 ಜನರನ್ನು ವಿಶೇಷ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿದೆ. ಧರಣಿನಿರತರಿಗೆ ಬೆಳಗ್ಗೆ ತಿಂಡಿ ಹಾಗೂ ಸಂಜೆಯ ಸ್ನಾ್ಯಕ್ಸ್ ಮತ್ತು ಕಾಫಿಯನ್ನು ಶಾಸಕರ ಭವನದ ಹೋಟೆಲ್​ನಿಂದ ಸರಬರಾಜು ಮಾಡಲಾಗುತ್ತಿದೆ. ಮಧ್ಯಾಹ್ನ ಮತ್ತು ರಾತ್ರಿ ಊಟವನ್ನು ಸೌತ್ ರುಚೀಸ್​ನಿಂದ ತರಿಸಲಾಗುತ್ತಿದೆ. ದಿನ 100 ಜನರಿಗೆ ಊಟ ತರಿಸಿ ಅದನ್ನು 120 ಜನರಿಗೆ ಸರಬರಾಜು ಮಾಡುವ ವ್ಯವಸ್ಥೆ ಮಾಡಲಾಗಿದೆ. ಊಟ, ತಿಂಡಿ, ಕಾಫಿ ಸೇರಿ ಒಬ್ಬರಿಗೆ ಸುಮಾರು 600 ರೂ. ಖರ್ಚಾಗುತ್ತದೆ ಎಂದು ಹೇಳಲಾಗಿದೆ.

    ವೆಚ್ಚ ಹೇಗೆ?: ಸದಸ್ಯರಿಗೆ ದಿನಕ್ಕೆ 2000 ರೂ. ಭತ್ಯೆ ನೀಡಲಾಗುತ್ತದೆ. ಅಧಿವೇಶನ ಸಂದರ್ಭದಲ್ಲಿ ವಿಧಾನಸಭೆಯ 950 ಹಾಗೂ ಕೌನ್ಸಿಲ್​ನ 350 ಸಿಬ್ಬಂದಿಗೆ ದಿನಕ್ಕೆ 750 ರೂ. ವಿಶೇಷ ಭತ್ಯೆ ನೀಡಲಾಗುತ್ತದೆ. 120 ಜನ ಪೊಲೀಸರು ಹಾಗೂ 300 ಜನ ಭದ್ರತಾ ಸಿಬ್ಬಂದಿಗೆ ದಿನಕ್ಕೆ 500 ರೂ. ವಿಶೇಷ ಭತ್ಯೆ ನೀಡಲಾಗುತ್ತದೆ. ಜತೆಗೆ ವಿದ್ಯುತ್, ನೀರು ಸೇರಿ ಇತರ ಬಿಲ್​ಗಳು ಅಧಿವೇಶನದ ಸಮಯದಲ್ಲಿ ಅಧಿಕವಾಗಿರುತ್ತವೆ.

    ಮನೆ ನೆಲಸಮ ಮಾಡಲು ಬಂದಿದ್ದಲ್ಲದೆ ಮನೆಯವರನ್ನೇ ಸುಟ್ಟುಕೊಂದರು; 9 ಮಂದಿಯ ಸೆರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts