More

    ಮನೆ ನೆಲಸಮ ಮಾಡಲು ಬಂದಿದ್ದಲ್ಲದೆ ಮನೆಯವರನ್ನೇ ಸುಟ್ಟುಕೊಂದರು; 9 ಮಂದಿಯ ಸೆರೆ

    ಬಿಹಾರ: ಭೂವಿವಾದಕ್ಕೆ ಸಂಬಂಧಿಸಿದಂತೆ ಮನೆ ನೆಲಸಮ ಮಾಡಲು ಬಂದವರಿಗೆ ಅಡ್ಡ ನಿಂತಿದ್ದಕ್ಕೆ ಆ ಮನೆಯವರನ್ನೇ ಸುಟ್ಟುಕೊಂದಿದ್ದ ಪ್ರಕರಣದಲ್ಲಿ ಪೊಲೀಸರು 9 ಮಂದಿಯನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಇಬ್ಬರು ಸಾವಿಗೀಡಾಗಿದ್ದು, ಒಬ್ಬರು ಗಾಯಗೊಂಡಿದ್ದಾರೆ.

    ಭೂವಿವಾದಕ್ಕೆ ಸಂಬಂಧಿಸಿದಂತೆ ತಮ್ಮ ಮನೆಯನ್ನು ನೆಲಸಮ ಮಾಡಲು ಬಂದಿದ್ದಕ್ಕೆ ಆ ಮನೆಯ ಮೂವರು ಅದಕ್ಕೆ ಆಕ್ಷೇಪವೊಡ್ಡಿ ಅಡ್ಡ ನಿಂತಿದ್ದರು. ಆದರೆ ಅದನ್ನು ಲೆಕ್ಕಿಸದೆ ಮುಂದುವರಿದ ವಿರೋಧಿಗಳು ಆ ಮನೆಯ ಮೂವರಿಗೆ ಬೆಂಕಿ ಹಚ್ಚಿದ್ದರು. ಈ ಪ್ರಕರಣದಲ್ಲಿ 32 ವರ್ಷದ ಗರ್ಭಿಣಿ ಪಿಂಕಿ ಝಾ, ಆಕೆಯ ಸಹೋದರ ಸಂಜಯ್ ಝಾ (30) ಮತ್ತು ಸಹೋದರಿ ನಿಕ್ಕಿಗೆ ಬೆಂಕಿ ಹಚ್ಚಲಾಗಿತ್ತು.

    ಫೆ. 10ರಂದು ಶಿವಕುಮಾರ್ ಝಾ ಎಂಬಾತನ ನೇತೃತ್ವದಲ್ಲಿ ಬಿಹಾರದ ದರ್ಭಂಗ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿತ್ತು. ಪಿಂಕಿ ಮತ್ತು ಸಂಜಯ್​ ಪಾಟ್ನಾದ ಆಸ್ಪತ್ರೆಯಲ್ಲಿ ಫೆ. 15ರಂದು ಮೃತಪಟ್ಟಿದ್ದರು. ಪ್ರಕರಣ ಸಂಬಂಧ ನಿಕ್ಕಿ ನೀಡಿದ ದೂರು ಹಾಗೂ ವಿಡಿಯೋ ತುಣುಕಿನ ಆಧಾರದ ಮೇಲೆ ಪೊಲೀಸರು ನಿನ್ನೆ ಇಬ್ಬರನ್ನು ಬಂಧಿಸಿದ್ದು, ಇದುವರೆಗೆ ಒಟ್ಟು 9 ಮಂದಿಯ ಬಂಧನವಾಗಿದೆ.

    ಕಬ್ಬು ತಿನ್ನುವ ಆಸೆಯಿಂದಾಗಿ ಪ್ರಾಣ ಕಳ್ಕೊಂಡ ಬಾಲಕ; ಟ್ರ್ಯಾಕ್ಟರ್​ ಅಡಿಗೆ ಸಿಲುಕಿ ಸಾವು…

    ಬರೀ ಚಿಲ್ಲರೆ ಹಣದಲ್ಲೇ ಸ್ಕೂಟರ್ ಖರೀದಿಸಿದ ಭೂಪ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts