ಬೆಂಗಳೂರು: ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಬೆಳವಣಿಗೆಯ ಬಗ್ಗೆ ಖ್ಯಾತ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಅವರು ಭವಿಷ್ಯ ನುಡಿದಿದ್ದು, ಉಗ್ರರ ಆಳ್ವಿಕೆ ಶೀಘ್ರವೇ ಕೊನೆಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ತಮ್ಮ ಫೇಸ್ಬುಕ್ನಲ್ಲಿ ಆಫ್ಘಾನ್ಗೆ ಕವಿದಿರುವ ಕಾರ್ಮೋಡದ ಬಗ್ಗೆ ಪ್ರಕಾಶ್ ಅಮ್ಮಣ್ಣಾಯ ಹೀಗೆ ಬರೆದುಕೊಂಡಿದ್ದಾರೆ... ಕುಜ ದೃಷ್ಟಿ ಕೇತುವಿಗಿರಬೇಕು, ರವಿಯಿಂದ ಕೇತುವು 80°( ಉತ್ಪಾತ ಲಗ್ನವಾಗುತ್ತದೆ) ದೂರದಲ್ಲಿ ಇರಬೇಕು. ಕುಜನು ಈ ಉತ್ಪಾತ ಲಗ್ನಕ್ಕೆ ಬೆಂಬಲವಾಗಿ ತನ್ನ ನಾಲ್ಕನೆಯ ದೃಷ್ಟಿಯಲ್ಲಿ ಇರಬೇಕು. ಚಂದ್ರ, ಶುಕ್ರ, ಬುಧ ಹಾಗೂ ಗುರು ಸಂಪರ್ಕ ಈ ಸ್ಥಿತಿಗೆ ಇರಬಾರದು. ಹೀಗಿದ್ದಾಗ ಇದೊಂದು ಭೀಕರ ಕಾಳಗವೋ, ಭೂ ಕಂಪನವೋ,ಅಥವಾ ಭೂಮಿ ಕಂಪಿಸುವ ವಾತಾವರಣವೋ,ಅಗ್ನಿ ಅನಾಹುತವೋ ಆಗಲು ಸಾಧ್ಯ ಇರುವ ದಿನವಾಗುತ್ತದೆ.
ಆಗಷ್ಟ್ 15ರಂದು ತಾಲಿಬಾನಿಗಳು ಆಫ್ಘಾನ್ ರಾಜಧಾನಿ ಕಾಬುಲ್ ವಶಕ್ಕೆ ಪಡೆದುಕೊಳ್ಳುತ್ತಿದ್ದಂತೆ ಇಡೀ ಆಫ್ಘಾನ್ ತಾಲಿಬಾನಿಗಳ ವಶವಾಗಿದೆ. ಶಾಂತಿ ನೆಲೆಸಿದ್ದ ಆಫ್ಘಾನ್ ನೆಲದಲ್ಲಿ ಸದ್ಯ ಮದ್ದು ಗುಂಡುಗಳ ಆರ್ಭಟ ಜೋರಾಗಿದ್ದು, ಅಲ್ಲಿನ ಜನರು ನಿರಂತರವಾಗಿ ಭಯದ ವಾತಾವರಣದಲ್ಲಿ ಬದುಕುತ್ತಿದ್ದಾರೆ. ಸಾಕಷ್ಟು ಮಂದಿ ತಾಲಿಬಾನ್ ಆಡಳಿತಕ್ಕೆ ಹೆದರಿ ದೇಶ ತೊರೆಯಲು ಹವಣಿಸುತ್ತಿದ್ದು, ಕಾಬುಲ್ ವಿಮಾನ ನಿಲ್ದಾಣದಲ್ಲಿ ಕಿಕ್ಕಿರಿದು ತುಂಬಿದ್ದಾರೆ. ಕಳೆದ ಗುರುವಾರವಷ್ಟೇ ಕಾಬುಲ್ ಏರ್ಪೋರ್ಟ್ನಲ್ಲಿ ಅಮೆರಿಕ ಸೇನಾ ಪಡೆಗಳನ್ನು ಗುರಿಯಾಗಿಸಿ ಐಎಸ್-ಕೆ ಉಗ್ರ ಸಂಘಟನೆ ನಡೆಸಿದ ಆತ್ಮಾಹುತಿ ದಾಳಿಯಲ್ಲಿ ಅಮೆರಿಕದ 13 ಯೋಧರು ಸೇರಿ 100ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಹೀಗಾಗಿ ಆಫ್ಘಾನ್ನ ಪರಿಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ.