ಜಿಲ್ಲೆ

ಬೆಳ್ಳಂಬೆಳಗ್ಗೆ 75 ಕಡೆಗಳಲ್ಲಿ ಎಸಿಬಿ ದಾಳಿ ಮಾಡಿರುವ 18 ಸರ್ಕಾರಿ ಅಧಿಕಾರಿಗಳ ಸಂಪೂರ್ಣ ಮಾಹಿತಿ ಇಲ್ಲಿದೆ...

ಬೆಂಗಳೂರು: ಇಂದು ಬೆಳ್ಳಂಬೆಳಗ್ಗೆ ರಾಜ್ಯದ ಸರ್ಕಾರಿ ಅಧಿಕಾರಿಗಳಿಗೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಶಾಕ್​ ನೀಡಿದೆ. 18 ಅಧಿಕಾರಿಗಳ ವಿರುದ್ಧ ದಾಖಲಾಗಿರುವ ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಳಿ ನಡೆದಿದ್ದು, 75 ಕಡೆಗಳಲ್ಲಿ ಎಸಿಬಿ ಶೋಧ ಕಾರ್ಯಾಚರಣೆ ಆರಂಭಿಸಿದೆ. 100 ಅಧಿಕಾರಿಗಳು ಹಾಗೂ 300 ಸಿಬ್ಬಂದಿ ನೇತೃತ್ವದಲ್ಲಿ ದಾಳಿ ನಡೆದಿದೆ. ದಾಳಿಯಾಗಿರುವ 18 ಅಧಿಕಾರಿಗಳ ವಿವರಗಳು ಈ ಕೆಳಗಿನಂತಿವೆ

1. ಜ್ಞಾನೇಂದ್ರ ಕುಮಾರ್- ಹೆಚ್ಚುವರಿ ಆಯುಕ್ತರು ಸಾರಿಗೆ, ಟ್ರಾಡ್ ಸಾರಿಗೆ ಮತ್ತು ಸುರಕ್ಷತೆ, ಬೆಂಗಳೂರು

2. ರಾಕೇಶ್ ಕುಮಾರ್- ಬಿಡಿಎ, ಪಟ್ಟಣ ಯೋಜನೆ

3. ರಮೇಶ ಕಣಕಟ್ಟೆ- ಆರ್.ಎಫ್.ಓ., ಸಾಮಾಜಿಕ ಅರಣ್ಯ, ಯಾದಗಿರಿ

4. ಬಸವರಾಜ ಶೇಖರ ರೆಡ್ಡಿ ಪಾಟೀಲ್- ಕಾರ್ಯನಿರ್ವಾಹಕ ಅಭಿಯಂತರ, ಕೌಜಲಗಿ ವಿಭಾಗ, ಗೋಕಾಕ

5. ಬಸವ ಕುಮಾರ್ ಎಸ್ ಅಣ್ಣಿಗೇರಿ - ಶಿರಸ್ತೇದಾರ್, ಡಿಸಿ ಕಛೇರಿ, ಗದಗ

6. ಗೋಪಿನಾಥ್ ಸಾ ಎನ್ ಮಾಳಗಿ- ಪ್ರಾಜೆಕ್ಟ್ ಮ್ಯಾನೇಜರ್, ನಿರ್ಮಿತಿ ಕೇಂದ್ರ, ವಿಜಯಪುರ

7. ಬಿ ಕೆ ಶಿವಕುಮಾರ್- ಹೆಚ್ಚುವರಿ ಡಿಟೆಕ್ಟರ್, ಇಂಡಸ್ಟ್ರಿವ್ಸ್ ಮತ್ತು ಕಾಮರ್ಸ್, ಬೆಂಗಳೂರು

8. ಶಿವಾನಂದ್ ಪಿ ಶರಣಪ್ಪ ಖೇಡಗಿ- ಆರ್​ಎಫ್​ಒ, ಬಾದಾಮಿ

9. ಮಂಜುನಾಥ್- ಸಹಾಯಕ ಆಯುಕ್ತ, ರಾಮನಗರ

10. ಶ್ರೀನಿವಾಸ್- ಜನರಲ್ ಮ್ಯಾನೇಜರ್, ಸಮಾಜ ಕಲ್ಯಾಣ ಇಲಾಖೆ

11. ಮಹೇಶ್ವರಪ್ಪ- ಜಿಲ್ಲಾ ಪರಿಸರ ಅಧಿಕಾರಿ, ದಾವಣಗೆರೆ

12. ಕೃಷ್ಣನ್- ಎಇ, ಎಪಿಎಂಸಿ, ಹಾವೇರಿ

13. ಚಲುವರಾಜ್- ಅಬಕಾರಿ ನಿರೀಕ್ಷಕರು, ಗುಂಡ್ಲುಪೇಟೆ ತಾಲೂಕು

14. ಗಿರೀಶ್- ಸಹಾಯಕ ಇಂಜಿನಿಯರ್, ರಾಷ್ಟ್ರೀಯ ಹೆದ್ದಾರಿ ವಿಭಾಗ

15. ಬಾಲಕೃಷ್ಣ ಹೆಚ್ ಎನ್- ಪೊಲೀಸ್ ಇನ್ಸ್​ಪೆಕ್ಟರ್, ವಿಜಯನಗರ ಪೊಲೀಸ್ ಠಾಣೆ, ಮೈಸೂರು

16. ಗವಿರಂಗಪ್ಪ- ಎಇಇ, ಪಿಡಬ್ಲ್ಯೂಡಿ, ಚಿಕ್ಕಮಗಳೂರು

17. ಅಶೋಕ್ ರೆಡ್ಡಿ ಪಾಟೀಲ್- ಎಇಇ, ಕೃಷ್ಣ ಭಾಗ್ಯ ಜಲ ನಿಗಮ ಲಿ, ದೇವದುರ್ಗ, ರಾಯಚೂರು

18. ದಯಾ ಸುಂದರ್ ರಾಜು- ಎಇಇ, ಕೆಪಿಟಿಚಿಎಲ್​, ದಕ್ಷಿಣ ಕನ್ನಡ