ಬೆಳ್ತಂಗಡಿ: ದೇವಾಂಗ ಸಮಾಜವು ಅಭಿವೃದ್ಧಿ ಜತೆಗೆ ಪರಿಸರ ಕಾಳಜಿ, ಸಂಸ್ಕೃತಿ ಉಳಿಸಿ ಬೆಳೆಸುವ ಬಗ್ಗೆ ಸಮರ್ಪಣಾ ಮನೋಭಾವದಿಂದ ತೊಡಗಿಸಿಕೊಳ್ಳಬೇಕು ಎಂದು ದೇವಾಂಗ ಸಮಾಜ ಉಜಿರೆ ವಲಯದ ಮಾಜಿ ಅಧ್ಯಕ್ಷ ಭಾಸ್ಕರ ಎಂ.ಡಿ ಹೇಳಿದರು.
ಚಂದ್ಕೂರಿನಲ್ಲಿ ನಡೆದ ದೇವಾಂಗ ಸಮಾಜ ಮುಂಡಾಜೆ ಘಟಕದ ತ್ರೈಮಾಸಿಕ ಸಭೆ ಉದ್ಘಾಟಿಸಿ ಮಾತನಾಡಿದರು.
ಆಷಾಢದಲ್ಲಿ ಒಂದು ದಿನ ಕಾರ್ಯಕ್ರಮ ಆಯೋಜನೆ, ವನಮಹೋತ್ಸವ, ದತ್ತಿನಿಧಿ ಕಾರ್ಯಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿ, ಯಶಸ್ವಿಗೊಳಿಸುವುದೆಂದು ನಿರ್ಣಯಿಸಲಾಯಿತು. ಸಮಾಜಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಿ ಸಹಕರಿಸುತ್ತಿರುವ ವಿನೋದ್ ಅವರನ್ನು ಸನ್ಮಾನಿಸಲಾಯಿತು.
ರಾಜ್ ಗೋಪಾಲ್ ಸೋಮಂತಡ್ಕ ಅಧ್ಯಕ್ಷತೆ ವಹಿಸಿದ್ದರು. ದೇವಾಂಗ ಸಮಾಜ ಉಜಿರೆ ವಲಯದ ಅಧ್ಯಕ್ಷ ರವಿ ನೆಯ್ಯಲು, ವಲಯ ಸಂಘಟನಾ ಕಾರ್ಯದರ್ಶಿ ರೋಹಿತ್ ಕಾಶಿಬೆಟ್ಟು, ಘಟಕದ ಕಾರ್ಯದರ್ಶಿ ಮಹೇಂದ್ರ ಕೊಡಂಗೆ, ಕೋಶಾಧಿಕಾರಿ ಗಣೇಶ್ ಸಹಿತ ಹಲವರು ಉಪಸ್ಥಿತರಿದ್ದರು. ಸಚಿನ್ ಎಂ.ಎಸ್ ಸ್ವಾಗತಿಸಿದರು. ಶಶಿಧರ್ ವಂದಿಸಿದರು. ಸವಿತಾ ಕೇಶವ ದೇವಾಂಗ ಕಾರ್ಯಕ್ರಮ ನಿರೂಪಿಸಿದರು.