ನಾವುಂದ ಗ್ರಾಮದ ಅರೆಹೊಳೆಯಲ್ಲಿ ಶುಕ್ರವಾರ ಉದ್ಯಮಿ ಹಕ್ಕಾಡಿ ಜಗದೀಶ ಪೂಜಾರಿ ಇವರ ನೂತನ ಹವಾನಿಯಂತ್ರಣ ಹಳ್ಳಿಮಾರ್ಟ್ ಅನ್ನು ಸಚಿವ ಮಂಕಾಳ ಎಸ್.ವೈದ್ಯ ಉದ್ಘಾಟಿಸಿದರು. 
ಜಿಲ್ಲೆ

ಒಂದೇ ಸೂರಿನಡಿ ಗುಣಮಟ್ಟದ ಉತ್ಪನ್ನ

ಇಂದಿರಾ ಎನ್ ಕೆ

ಬೈಂದೂರು: ಗ್ರಾಮೀಣ ಪ್ರದೇಶವಾದ ಅರೆಹೊಳೆ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವುದು ಶ್ಲಾಘನೀಯ. ಗ್ರಾಮೀಣ ಭಾಗದಲ್ಲಿ ಇಂತಹ ಉದ್ಯಮಗಳ ಅಗತ್ಯವಿದೆ. ಒಂದೇ ಸೂರಿನಲ್ಲಿ ದಿನನಿತ್ಯ ಬಳಕೆ ಎಲ್ಲ ವಸ್ತುಗಳು ಲಭ್ಯವಿದ್ದು, ಜನರಿಗೆ ಹೆಚ್ಚಿನ ಅನುಕೂಲವಾಗಿಲಿದೆ ಎಂದು ರಾಜ್ಯ ಬಂದರು, ಮೀನುಗಾರಿಕೆ ಮತ್ತು ಜಲಸಾರಿಗೆ ಸಚಿವ ಮಂಕಾಳ ಎಸ್.ವೈದ್ಯ ಹೇಳಿದರು.

ನಾವುಂದ ಗ್ರಾಮದ ಅರೆಹೊಳೆಯಲ್ಲಿ ಶುಕ್ರವಾರ ಉದ್ಯಮಿ ಹಕ್ಕಾಡಿ ಜಗದೀಶ ಪೂಜಾರಿ ಅವರ ನೂತನ ಹವಾನಿಯಂತ್ರಣ ಹಳ್ಳಿಮಾರ್ಟ್ (ಶ್ರೀ ಮಹಾಗಣಪತಿ ಸೂಪರ್ ಮಾರ್ಕೇಟ್) ಉದ್ಘಾಟಿಸಿ ಮಾತನಾಡಿದರು. ಗ್ರಾಹಕರಿಗೆ ಇಲ್ಲಿ ಉತ್ತಮ ಗುಣಮಟ್ಟದ ಉತ್ಪನ್ನ ಸಿಗಲಿವೆ. ಮನೆ ಬಾಗಿಲಿಗೆ ತಲುಪಿಸುವ ಸೌಲಭ್ಯ ಗ್ರಾಹಕರ ಸಮಯ ಉಳಿಸಲು ಸಹಾಯ ಮಾಡುತ್ತದೆ. ಇದು ಇನ್ನಷ್ಟು ಅಭಿವೃದ್ಧಿ ಹೊಂದಲಿ ಎಂದರು. ಸಂಸ್ಥೆಯ ವತಿಯಿಂದ ಭಾಗವಹಿಸಿದ ಗಣ್ಯರನ್ನು ಗೌರವಿಸಲಾಯಿತು. ನಾವುಂದ ಗ್ರಾಪಂ ಅಧ್ಯಕ್ಷ ನರಸಿಂಹ ದೇವಾಡಿಗ, ಮರವಂತೆ-ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್.ರಾಜು ಪೂಜಾರಿ, ತಾಪಂ ಮಾಜಿ ಅಧ್ಯಕ್ಷ ಮಹೇಂದ್ರ ಪೂಜಾರಿ, ಕಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್.ಪ್ರಕಾಶ್ಚಂದ್ರ ಶೆಟ್ಟಿ, ರವಿ ಶೆಟ್ಟಿ ಕುದ್ರುಕೋಡು, ಹಕ್ಕಾಡಿ ಜಗದೀಶ್ ಪೂಜಾರಿ ಹಾಗೂ ಕುಟುಂಬದವರು ಇದ್ದರು.