ಕಡಬ: ಪುತ್ತೂರು- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಬೆಳಂದೂರು ಗ್ರಾಪಂ ವ್ಯಾಪ್ತಿಯ ಕಾಣಿಯೂರು ಸಮೀಪ ಬೈತಡ್ಕ ಎಂಬಲ್ಲಿ ಎರಡು ತಿಂಗಳ ಹಿಂದೆ ಬಾರಿ ಮಳೆಗೆ ಕುಸಿತಗೊಂಡ ರಸ್ತೆ ಮತ್ತು ಕುಸಿತಗೊಂಡ ಹೆದ್ದಾರಿ ಕೆಳಭಾಗದಲ್ಲಿ ಹಾದು ಹೋಗುವ ತೋಡಿಗೆ ಮಣ್ಣು ಬಿದ್ದು ಬ್ಲಾಕ್ ಆಗಿ ಕೃಷಿ ತೋಟಕ್ಕೆ ನೀರು ನುಗ್ಗಿ ಹಾನಿಯಾಗಿತ್ತು. ಈ ಸ್ಥಳಕ್ಕೆ ಪಿಡಬ್ಲ್ಯೂಡಿ ಸಹಾಯಕ ಇಂಜಿನಿಯರ್ ಎಲ್.ಸಿ.ಸಿಕ್ವೇರಾ ಭೇಟಿ ಪರಿಶೀಲನೆ ನಡೆಸಿದರು.
ತೋಡಿಗೆ ಬಿದ್ದ ಮಣ್ಣನ್ನು ತಕ್ಷಣ ತೆರವುಗೊಳಿಸುವ ಬಗ್ಗೆ ಇಂಜಿನಿಯರ್ ಭರವಸೆ ನೀಡಿದರು. ಬೆಳಂದೂರು ಗ್ರಾಪಂ ಅಧ್ಯಕ್ಷೆ ತೇಜಾಕ್ಷಿ ಕೊಡಂಗೆ, ಉಪಾಧ್ಯಕ್ಷ ಜಯಂತ ಅಬೀರ, ಪಿಡಿಒ ನಾರಾಯಣ್, ಸದಸ್ಯರಾದ ಮೋಹನ್ ಅಗಳಿ, ವಿಠಲ ಗೌಡ ಅಗಳಿ, ಲೋಹಿತಾಕ್ಷ ಕೆಡೆಂಜಿಕಟ್ಟ, ಉಮೇಶ್ವರಿ ಅಗಳಿ, ತಾರಾ ಅನ್ಯಾಡಿ, ಸ್ಥಳೀಯರಾದ ಜಗದೀಶ್ ಅಗಳಿ, ಮೋನಪ್ಪ ಗೌಡ ಕೂರೋಡಿ, ಹರೀಶ್ ಅಗಳಿ ಮೊದಲಾದವರಿದ್ದರು.