ಜಿಲ್ಲೆ

20ರಂದು ಪುವೆಂಪು ನೆನಪು ಕಾರ್ಯಕ್ರಮ

Avinash R

ಬದಿಯಡ್ಕ: ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಬೆಂಗಳೂರು ನೇತೃತ್ವದಲ್ಲಿ ತುಳುರತ್ನ, ಬಹುಭಾಷಾ ವಿದ್ವಾಂಸ ಡಾ.ಪಿ.ವೆಂಕಟರಾಜ ಪುಣಿಚಿತ್ತಾಯ ಅವರ ಸ್ಮರಣೆ ಪುವೆಂಪು ನೆನಪು-2024 ಕಾರ್ಯಕ್ರಮ ನ.20ರಂದು ಬೆಳಗ್ಗೆ 9ರಿಂದ ಬದಿಯಡ್ಕ ವಳಮಲೆ ಇರಾ ಸಭಾಭವನದಲ್ಲಿ ನಡೆಯಲಿದೆ.

ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಅಧ್ಯಕ್ಷತೆ ವಹಿಸುವರು. ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ದಿವ್ಯ ಉಪಸ್ಥಿತರಿರುವರು. ನಿವೃತ್ತ ಉಪನ್ಯಾಸಕ, ಸಾಹಿತಿ ಪ್ರೊ.ವಿ.ಬಿ.ಅರ್ತಿಕಜೆ ಉದ್ಘಾಟಿಸುವರು.

ಕಲ್ಕೂರ ಪ್ರತಿಷ್ಠಾನದ ಎಸ್.ಪ್ರದೀಪ್ ಕುಮಾರ್ ಕಲ್ಕೂರ ನುಡಿನಮನ ಸಲ್ಲಿಸುವರು. ಉಪನ್ಯಾಸಕ ಡಾ.ರಾಧಾಕೃಷ್ಣ ಬೆಳ್ಳೂರು ಕೃತಿ ಪರಿಚಯ ನೀಡುವರು. ಹಿರಿಯ ವಿದ್ವಾಂಸ ಬೆಳ್ಳಿಗೆ ನಾರಾಯಣ ಮಣಿಯಾಣಿ ಅವರಿಗೆ ಪುವೆಂಪು ಪ್ರಶಸ್ತಿ ನೀಡಿ ಗೌರವಿಸಲಾಗುವುದು.