ಜಿಲ್ಲೆ

ತಡರಾತ್ರಿವರೆಗೆ ಓದಿ ಮಲಗಿದ ವಿದ್ಯಾರ್ಥಿನಿ ಮತ್ತೆ ಏಳಲೇ ಇಲ್ಲ!

ಮಂಗಳೂರು: ಪ್ರತಿಭಾನ್ವಿತ ಕಾಲೇಜು ವಿದ್ಯಾರ್ಥಿನಿ ಮಲಗಿದ್ದಲ್ಲೇ ಮೃತಪಟ್ಟ ಘಟನೆ 34 ನೆಕ್ಕಿಲಾಡಿ ಗ್ರಾಮದ ಕರ್ವೇಲು ಬಳಿ ಸಂಭವಿಸಿದೆ.
ಉದ್ಯಮಿ ದಾವೂದ್‌ ಅವರ ಪುತ್ರಿ ಹಫೀಝಾ (17) ಮೃತ ವಿದ್ಯಾರ್ಥಿನಿ. ಹೃದಯಾಘಾತದಿಂದ ಸಾವು ಸಂಭವಿಸಿದೆ ಎಂದು ವೈದ್ಯರು ಹೇಳಿದ್ದಾರೆ.

ಹಫೀಝಾ ಪುತ್ತೂರಿನ ಸೈಂಟ್‌ ಫಿಲೋಮಿನಾ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಓದುತ್ತಿದ್ದರು. ಬುಧವಾರ ತಡರಾತ್ರಿವರೆಗೆ ಅಭ್ಯಾಸ ನಿರತಳಾಗಿದ್ದ ಹಫೀಝ ಬಳಿಕ ನಿದ್ರೆ ಮಾಡಲು ತೆರಳಿದರು. ಗುರುವಾರ ಬೆಳಗ್ಗೆ ಎದ್ದೇಳದೇ ಇರುವುದನ್ನು ಕಂಡು ಮನೆಯವರು ಎಬ್ಬಿಸಲು ಹೋದಾಗ ಮೃತಪಟ್ಟಿರುವುದು ಕಂಡುಬಂದಿದೆ.

ಮೃತ ವಿದ್ಯಾರ್ಥಿನಿ ತಂದೆ, ತಾಯಿ ಹಾಗೂ ಮೂವರು ಸಹೋದರರನ್ನು ಅಗಲಿದ್ದಾರೆ.