ಯಲಬುರ್ಗಾ:ನಿರಂತರ ಸಂಗೀತ ಆಲಿಸುವುದರಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ಲಭಿಸುತ್ತದೆ ಎಂದು ಬಂಡಿ ಗ್ರಾಮ ಹಿರೇಮಠದ ವೀರೇಶಯ್ಯ ತಾತಾ ಹೇಳಿದರು.
ತಾಲೂಕಿನ ಬಂಡಿ ಗ್ರಾಮದ ಮೂಲಕ ಜಿಲ್ಲಾ ಸಂಗೀತ ಬಳಗದಿಂದ ವೀರೇಶ್ವರ ಪುಣ್ಯಾಶ್ರಮ ಮಠಕ್ಕೆ ಜಾತ್ರಾ ನಿಮಿತ್ತ ಪಾದಯಾತ್ರೆಗೆ ಹೊರಡುವ ಮುನ್ನ ಪಂ.ಪುಟ್ಟರಾಜ ಗವಾಯಿಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
ಸಂಗೀತ ಕೇಳುವುದರಿಂದ ಚಿಂತೆ ದೂರವಾಗಿ, ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗುತ್ತದೆ. ಅಂಧ, ಅನಾಥ ಮಕ್ಕಳ ಬಾಳು ಬೆಳಗಿದ ಪುಟ್ಟರಾಜ ಗವಾಯಿಗಳು ಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ. ಪುಟ್ಟರಾಜ್ಟರ ಮಾರ್ಗದಲ್ಲಿ ಪ್ರತಿಯೊಬ್ಬರೂ ಮುನ್ನಡೆಯಬೇಕು. ಮಕ್ಕಳು, ಯುವಜನಾಂಗ ಸಂಗೀತದತ್ತ ಆಸಕ್ತಿ ಹೊಂದಬೇಕೆಂದರು.
ಪ್ರಮುಖರಾದ ಶರಣಕುಮಾರ ಬಂಡಿ, ವೀರನಗೌಡ ನಿಂಬನಗೌಡ್ರ, ಸಿದ್ದಪ್ಪ ಭದ್ರಗೌಡ್ರ, ಕಾಮಪ್ಪ, ಶಿವಶರಣಪ್ಪ ನೆಲಗಣಿ, ರಮೇಶಗೌಡ ನಿಂಬನಗೌಡ್ರ ಹಾಗೂ ಗ್ರಾಮಸ್ಥರು ಇದ್ದರು.