ಮಂಗಳೂರು: ಸ್ನೇಹಿತರೊಂದಿಗೆ ಪಬ್ ಜಿ ಆಟವಾಡಲು ಮನೆಯಿಂದ ಹೊರ ಹೋದ 12 ವರ್ಷದ ಬಾಲಕ ಬರ್ಬರವಾಗಿ ಹತ್ಯೆಯಾಗಿದ್ದಾನೆ.
ಮಂಗಳೂರು ಹೊರವಲಯದ ಉಳ್ಳಾಲ ಠಾಣಾ ವ್ಯಾಪ್ತಿಯ ಕೆಸಿ ರಸ್ತೆ ಬಳಿ ಶನಿವಾರ ಸಂಜೆ ನಾಪತ್ತೆಯಾಗಿದ್ದ ಆಕೀಫ್ (12) ಶವವಾಗಿ ಪತ್ತೆಯಾಗಿದ್ದಾನೆ.
ಪ್ರತಿನಿತ್ಯ ಸಂಜೆ ವೇಳೆ ಪಬ್ ಜಿ ಆಡಲು ಆಕೀಫ್ಗೆ ಪೋಷಕರು ಅವಕಾಶ ಕೊಟ್ಟಿದ್ದರಂತೆ. ಶನಿವಾರ ಸಂಜೆ ಸ್ನೇಹಿತರು ಕರೆ ಮಾಡಿದ್ದಾರೆ ಎಂದು ಮನೆ ಪಕ್ಕದ ಗ್ರೌಂಡ್ಗೆ ಮೊಬೈಲ್ ಹಿಡಿದುಕೊಂಡು ಆಕೀಫ್ ಹೋಗಿದ್ದ. ಸ್ನೇಹಿತರೊಂದಿಗೆ ಪಬ್ ಜಿ ಆಡುತ್ತಿದ್ದನಂತೆ. ಇದೇ ವಿಚಾರಕ್ಕೆ ಕೊಲೆ ನಡೆದಿರಬಹುದು ಎಂದು ಪಾಲಕರು ಶಂಕಿಸಿದ್ದು, ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.