ಯಲಬುರ್ಗಾ ವಕೀಲರ ಸಂಘದ ಕಚೇರಿ ಭೇಟಿ ನೀಡಿದ್ದ ನಿವೃತ್ತ ನ್ಯಾಯಾಧೀಶ ಸಂತೋಷ ಹೆಗಡೆ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ವಿಶ್ರಾಂತ ನ್ಯಾಯಾಧೀಶರಾದ ಎಸ್.ಜಿ.ಪಲ್ಲೇದ, ಎಸ್.ಎಚ್.ಮಿಟ್ಟಲಕೋಡ, ಕೀಣಕೇರಿ, ಬಾಳಪ್ಪ ಭೂತೆ, ಎಸ್.ಎನ್.ಗದ್ದಿ, ಯಲಬುರ್ಗಾ ಹಿರಿಯ ಶ್ರೇಣಿ ನ್ಯಾಯಾಧೀಶ ಜೆ.ರಂಗಸ್ವಾಮಿ, ಕಿರಿಯ ಶ್ರೇಣಿ ನ್ಯಾಯಾಧೀಶ ಸಂಜೀವ್ ಪಶ್ಚಪೂರ ಇತರರಿದ್ದರು. 
ಜಿಲ್ಲೆ

ನೊಂದವರಿಗೆ ನ್ಯಾಯ ದೊರಕಿಸಿ ಕೊಡಿ

ಯಲಬುರ್ಗಾ: ವಕೀಲ ವೃತ್ತಿ ಹೆಚ್ಚು ಜವಾಬ್ದಾರಿಯುತವಾದದ್ದು. ಅದನ್ನು ಅರಿತು ನೊಂದವರಿಗೆ ನ್ಯಾಯ ದೊರಕಿಸುವ ಹೊಣೆ ವಕೀಲರ ಮೇಲಿದೆ ಎಂದು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಧೀಶ ಸಂತೋಷ ಹೆಗಡೆ ಹೇಳಿದರು.

ಪಟ್ಟಣದ ವಕೀಲರ ಸಂಘದ ಕಾರ್ಯಾಲಯಕ್ಕೆ ಸೋಮವಾರ ಭೇಟಿ ನೀಡಿ ಮಾತನಾಡಿದರು. ಕಾನೂನು ವ್ಯವಸ್ಥೆ ಎಲ್ಲರಿಗೂ ಸಮಾನವಾಗಿದೆ. ಅದರಂತೆ ವಕೀಲರು ಕರ್ತವ್ಯ ನಿರ್ವಹಿಸಿ. ನಿಮ್ಮ ಕೆಲಸ ಎಲ್ಲರ ಮನಸ್ಸು ಗೆಲ್ಲುವಂತಿರಬೇಕು. ಹಲವರಿಗೆ ದಾರಿದೀಪವಾಗುವಂತೆ ತೀರ್ಪು ನೀಡಬೇಕು ಎಂದರು.

ಜಿಲ್ಲಾ ವಿಶ್ರಾಂತ ನ್ಯಾಯಾಧೀಶರಾದ ಎಸ್.ಜಿ.ಪಲ್ಲೇದ, ಎಸ್.ಎಚ್.ಮಿಟ್ಟಲಕೋಡ, ಕೀಣಕೇರಿ, ಬಾಳಪ್ಪ ಭೂತೆ, ಎಸ್.ಎನ್.ಗದ್ದಿ, ಯಲಬುರ್ಗಾ ಹಿರಿಯ ಶ್ರೇಣಿ ನ್ಯಾಯಾಧೀಶ ಜೆ.ರಂಗಸ್ವಾಮಿ, ಕಿರಿಯ ಶ್ರೇಣಿ ನ್ಯಾಯಾಧೀಶ ಸಂಜೀವ್ ಪಶ್ಚಪೂರ ಇತರರಿದ್ದರು.