ಕಂಪ್ಲಿಯಲ್ಲಿ ಹಮ್ಮಿಕೊಂಡಿದ್ದ ಕಮಲಾ ಮಹಿಳಾ ಜ್ಞಾನವಿಕಾಸ ಕೇಂದ್ರ ಉದ್ಘಾಟನಾ ಕಾರ್ಯಕ್ರಮವನ್ನು ಬಿ.ಸಿ.ಟ್ರಸ್ಟ್ ಯೋಜನಾಧಿಕಾರಿ ರಾಘವೇಂದ್ರ ಉದ್ಘಾಟಿಸಿದರು. ಖಾಸಗಿ ಶಾಲೆಯ ಮುಖ್ಯಶಿಕ್ಷಕ ಬಡಿಗೇರ ಜಿಲಾನ್‌ಸಾಬ್, ಪುರಸಭೆ ಸದಸ್ಯೆ ಎಚ್.ಹೇಮಾವತಿ ಪೂರ್ಣಚಂದ್ರ, ಕೇಂದ್ರದ ಅಧ್ಯಕ್ಷೆ ವೆಂಕಮ್ಮ, ಸಮನ್ವಯಾಧಿಕಾರಿ ರೇಖಾ, ಸೇವಾ ಪ್ರತಿನಿಧಿ ಲತಾ ಇತರರಿದ್ದರು. 
ಜಿಲ್ಲೆ

ಮಕ್ಕಳಿಗೆ ತಾರತಮ್ಯರಹಿತ ಶಿಕ್ಷಣ ನೀಡಿ

ಗಾಯತ್ರಿ ಮಾಲಿಪಾಟೀಲ್

ಕಂಪ್ಲಿ: ಮಹಿಳೆಯರು ಸರ್ಕಾರಿ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಮಕ್ಕಳಿಗೆ ತಾರತಮ್ಯರಹಿತ ಶಿಕ್ಷಣ ಹಾಗೂ ಪೋಷಣೆ ಮಾಡಬೇಕು ಎಂದು ಖಾಸಗಿ ಶಾಲೆಯ ಮುಖ್ಯಶಿಕ್ಷಕ ಬಡಿಗೇರ ಜಿಲಾನ್‌ಸಾಬ್ ಹೇಳಿದರು.

ಪಟ್ಟಣದ ಮಾರುತಿ ನಗರ ವಲಯದ ಬಸವೇಶ್ವರ ಕಾರ್ಯಕ್ಷೇತ್ರದ ಜಂಡೆಕಟ್ಟಿ ಆವರಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್‌ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಕಮಲಾ ಮಹಿಳಾ ಜ್ಞಾನವಿಕಾಸ ಕೇಂದ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಟ್ರಸ್ಟ್ ಯೋಜನಾಧಿಕಾರಿ ರಾಘವೇಂದ್ರ ಜ್ಞಾನವಿಕಾಸ ಕೇಂದ್ರ ಉದ್ಘಾಟಿಸಿದರು. ಪುರಸಭೆ ಸದಸ್ಯೆ ಎಚ್.ಹೇಮಾವತಿ ಪೂರ್ಣಚಂದ್ರ, ಕೇಂದ್ರದ ಅಧ್ಯಕ್ಷೆ ವೆಂಕಮ್ಮ, ಸಮನ್ವಯಾಧಿಕಾರಿ ರೇಖಾ, ಸೇವಾ ಪ್ರತಿನಿಧಿ ಲತಾ ಇತರರಿದ್ದರು.