ಅಳವಂಡಿಯಲ್ಲಿ ಸ್ವಸಹಾಯ ಗುಂಪಿನ ಸದಸ್ಯರಿಗೆ ಹಮ್ಮಿಕೊಂಡಿದ್ದ ಎರಡು ದಿನಗಳ ಉದ್ಯಮಶೀಲತಾ ಅರಿವು ಕಾರ್ಯಕ್ರಮವನ್ನು ಬೆಂಗಳೂರು ಟೆರಿ ಸಂಸ್ಥೆ ಸಾಮಾಜಿಕ ಕಾರ್ಯಕರ್ತೆ ಮೀರಾ ಉದ್ಘಾಟಿಸಿದರು. ಮಹಿಳಾಧ್ವನಿ ಸಂಸ್ಥೆಯ ಮುಖ್ಯಸ್ಥೆ ಪ್ರಿಯದರ್ಶಿನಿ, ರಿವಾರ್ಡ್ ಟಿಂ ಲೀಡರ್ ಗವಿಸಿದ್ದಪ್ಪ, ಪ್ರಮುಖರಾದ ಗೀತಾ, ಬಸನಗೌಡ, ಲಕ್ಷ್ಮಣ ಇತರರಿದ್ದರು. 
ಜಿಲ್ಲೆ

ಮಹಿಳೆಯರಿಗೆ ಸೂಕ್ತ ನೆರವು ನೀಡಿ

ಗಾಯತ್ರಿ ಮಾಲಿಪಾಟೀಲ್

ಅಳವಂಡಿ: ಗ್ರಾಮೀಣ ಭಾಗದ ಮಹಿಳೆಯರು ಇಂದಿಗೂ ಪಾರಂಪರಿಕ ಆರ್ಥಿಕ ನೀತಿ ಮುಂದುವರಿಸಿದ್ದಾರೆ. ಸೂಕ್ತ ನೆರವಿನಿಂದ ಯಶಸ್ವಿ ಉದ್ಯಮಿಯಾಗುತ್ತಾರೆ ಎಂದು ಬೆಂಗಳೂರು ಟೆರಿ ಸಂಸ್ಥೆ ಸಾಮಾಜಿಕ ಕಾರ್ಯಕರ್ತೆ ಮೀರಾ ಹೇಳಿದರು.

ಗ್ರಾಮದಲ್ಲಿ ಕೃಷಿ ಇಲಾಖೆ, ಜಲನಯನ ಇಲಾಖೆ, ಸ್ವರ್ಡ್ ಕೆ. ಸಂಸ್ಥೆ, ಎಸ್‌ಬಿಐ ಗ್ರಾಮೀಣ ಸ್ವಯಂ ಉದ್ಯೋಗ ಸಂಸ್ಥೆ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಸ್ವಸಹಾಯ ಗುಂಪಿನ ಸದಸ್ಯರಿಗೆ ಎರಡು ದಿನಗಳ ಉದ್ಯಮಶೀಲತಾ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು. ಉದ್ಯಮದಲ್ಲಿ ನೂತನ ತಂತ್ರಜ್ಞಾನ ಅಳವಡಿಸಿಕೊಳ್ಳಲು ತರಬೇತಿ ಅವಶ್ಯ. ಆದ್ದರಿಂದ ಮಹಿಳೆಯರು ಸೌಲಭ್ಯ ಪಡೆದುಕೊಳ್ಳಿ. ಮಹಿಳೆಯರಿಗೆ ಉದ್ಯಮಶೀಲತೆ ಅರಿವು ಮೂಡಿಸಲು ಕುರಿ, ಮೇಕೆ ಸಾಕಣೆ, ಅಲಂಕಾರಿಕ ವಸ್ತು ತಯಾರಿಕೆ, ಹೊಲಿಗೆ ತರಬೇತಿ, ಹೈನುಗಾರಿಕೆ, ಜೇನು ಸಾಕಣೆ, ಜೂಟ್‌ಬ್ಯಾಗ್ ಮುಂತಾದ ವಸ್ತುಗಳ ತಯಾರಿಕೆ ತರಬೇತಿ ನೀಡಿ ಉದ್ಯಮಶೀಲರನ್ನಾಗಿ ಮಾಡುವುದು ತರಬೇತಿಯ ಉದ್ದೇಶವಾಗಿ ಎಂದು ತಿಳಿಸಿದರು.

ಮಹಿಳಾಧ್ವನಿ ಸಂಸ್ಥೆಯ ಮುಖ್ಯಸ್ಥೆ ಪ್ರಿಯದರ್ಶಿನಿ ಮಾತನಾಡಿ, ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರು ಸಬಲರಾಗುತ್ತಿದ್ದಾರೆ. ಆರ್ಥಿಕ ಸಹಾಯ, ಕೌಶಲ ತರಬೇತಿ, ಕ್ಷೇತ್ರ ಭೇಟಿ ಮೂಲಕ ಮಹಿಳೆಯರಿಗೆ ಮಾಹಿತಿ ನೀಡಲಾಗುತ್ತಿದೆ ಎಂದರು. ರಿವಾರ್ಡ್ ಟೀಂ ಲೀಡರ್ ಗವಿಸಿದ್ದಪ್ಪ, ಪ್ರಮುಖರಾದ ಗೀತಾ, ಬಸನಗೌಡ, ಲಕ್ಷ್ಮಣ ಇತರರಿದ್ದರು.