ಜಿಲ್ಲೆ

ಕಣ್ವತೀರ್ಥದಲ್ಲಿ ಪ್ರತಿಭಟನೆ, ಮೆರವಣಿಗೆ

ಸೌಮ್ಯ ಆರ್

ಮಂಜೇಶ್ವರ: ಕಣ್ವತೀರ್ಥ ಪರಿಸರದಲ್ಲಿ ಹಲವು ವರ್ಷಗಳಿಂದ ಪರಿಸರ ಮಾಲಿನ್ಯಕ್ಕೆ ಕಾರಣವಾಗಿರುವ ಮೀನು ಸಂಸ್ಕರಣಾ ಕೇಂದ್ರದ ವಿರುದ್ಧ ಕಣ್ವತೀರ್ಥ ನಾಗರಿಕ ಹಿತರಕ್ಷಣಾ ಸಮಿತಿ ಆಶ್ರಯದಲ್ಲಿ ಪ್ರತಿಭಟನಾ ಮೆರವಣಿಗೆ ಹಾಗೂ ಧರಣಿ ನಡೆಯಿತು.

ಕಣ್ವತೀರ್ಥ ಗೇಟ್‌ನಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆಯನ್ನು ಮಂಜೇಶ್ವರ ಗ್ರಾ.ಪಂ. ಮುಂಭಾಗದಲ್ಲಿ ಪೊಲೀಸರು ತಡೆದರು. ಬಳಿಕ ಮಂಜೇಶ್ವರ ಗ್ರಾ.ಪಂ. ಮುಂಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ನಿವೃತ್ತ ಸೇನಾಧಿಕಾರಿ ವಿಜಯ ಕುಮಾರ್, ಪ್ರಮುಖರಾದ ಮಧುಸೂದನ್ ಆಚಾರ್ಯ, ಜಯಂತ ಕುಮಾರ್, ಪವನ್ ಕುಮಾರ್, ಪ್ರವೀಣ್ ಕುಮಾರ್, ಸುಕುಮಾರ್ ಮಜಲ್, ಡಾ.ಚಂದ್ರಹಾಸ ಕಣ್ವತೀರ್ಥ ನೇತೃತ್ವ ನೀಡಿದ್ದರು.