ಜಿಲ್ಲೆ

30ರಂದು ಕಡಬ ತಾಲೂಕು ಕಚೇರಿ ಬಳಿ ಪ್ರತಿಭಟನೆ

Avinash R

ಕಡಬ: ಕಸ್ತೂರಿ ರಂಗನ್ ವರದಿ ಜಾರಿಯಾಗುವ ಹಿನ್ನೆಲೆಯಲ್ಲಿ ಕಡಬ ತಾಲೂಕಿನ ಬಲ್ಯ ಶ್ರೀ ಉಮಾಮಹೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ಗ್ರಾಮಸ್ಥರ ಪ್ರತಿಭಟನಾ ಪೂರ್ವಭಾವಿ ಸಭೆ ನಡೆಯಿತು.

ಮಲೆನಾಡು ಹಿತರಕ್ಷಣಾ ಸಮಿತಿ ಸಂಚಾಲಕ ಕಿಶೋರ್ ಶಿರಾಡಿ ಮಾತನಾಡಿದರು. ಸಭೆಯಲ್ಲಿ ಗ್ರಾಮಸ್ಥರು ಮುಂದಿನ ಹೋರಾಟದ ಬಗ್ಗೆ ಸಲಹೆ-ಸೂಚನೆ ನೀಡಿದರು. ಸೆ.30ರಂದು ಬೆಳಗ್ಗೆ ಕಡಬ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಯಿತು.

ಪ್ರಗತಿಪರ ಕೃಷಿಕ ರಾಜರಾಂ ಭಟ್ ಉಪಸ್ಥಿತರಿದ್ದರು. ಮಲೆನಾಡು ಹಿತರಕ್ಷಣಾ ಸಮಿತಿ ಬಲ್ಯ ಗ್ರಾಮ ಸಮಿತಿ ಸಂಚಾಲಕ ಧನಂಜಯ ಕೊಡಂಗೆ ಸ್ವಾಗತಿಸಿದರು. ಜನಾರ್ದನ ಗೌಡ ಅರಿಗ ವಂದಿಸಿದರು.