ಜಿಲ್ಲೆ

ಕಣ್ವತೀರ್ಥದಲ್ಲಿ ಪರಿಸರ ಮಾಲಿನ್ಯ : ನಾಗರಿಕ ಪ್ರತಿಭಟನೆಯ ರೂಪುರೇಷೆ ಪೂರ್ವಸಿದ್ಧತಾ ಸಭೆ

ಸೌಮ್ಯ ಆರ್

ಮಂಜೇಶ್ವರ: ಕಣ್ವತೀರ್ಥ ಪರಿಸರದಲ್ಲಿ ಹಲವು ವರ್ಷಗಳಿಂದ ಪರಿಸರ ಮಾಲಿನ್ಯ ಚಟುವಟಿಕೆಗಳಿಗೆ ಕಾರಣವಾಗಿರುವ ಮೀನು ಸಂಸ್ಕರಣಾ ಕೇಂದ್ರದ ವಿರುದ್ಧ ಮಂಜೇಶ್ವರ ಗ್ರಾಪಂ ಮುಂಭಾಗದಲ್ಲಿ ನಡೆಸಲು ಉದ್ದೇಶಿಸಿರುವ ಪ್ರತಿಭಟನಾ ಸಭೆಯ ರೂಪುರೇಷೆಯ ಪೂರ್ವಸಿದ್ಧತಾ ಸಭೆ ಕಣ್ವತೀರ್ಥ ನಾಗರಿಕ ಹಿತರಕ್ಷಣಾ ಸಮಿತಿ ಆಶ್ರಯದಲ್ಲಿ ಕಣ್ವತೀರ್ಥ ತಲಪಾಡಿಯಲ್ಲಿ ಇತ್ತೀಚೆಗೆ ನಡೆಯಿತು.

ಸಮಿತಿ ಅಧ್ಯಕ್ಷ ಕಮಾಂಡರ್ ವಿಜಯ ಕುಮಾರ್ ಮಾತನಾಡಿ, ಈ ಅಪಾಯಕಾರಿ ್ಯಾಕ್ಟರಿಯಿಂದ ಪರಿಸರದ ನೀರು ಗಾಳಿ ಕಲುಷಿತವಾಗುತ್ತಿದೆ. ತ್ಯಾಜ್ಯಯುಕ್ತ ಮಲಿನ ನೀರು ಅಂತರ್ಗಾಮಿಯಾಗಿ ಇಡೀ ಕಣ್ವತೀರ್ಥದ ಜನರ ನೆಮ್ಮದಿಯ ಬದುಕು ನಾಶ ಮಾಡುತ್ತಿದೆ. ಈ ಬಗ್ಗೆ 7 ವರ್ಷಗಳಲ್ಲಿ ಹಲವು ಪ್ರಯತ್ನ ಮಾಡಿದರೂ ಲ ದೊರೆಯದಿರುವುದಕ್ಕೆ ಪಂಚಾಯಿತಿ ನೇರ ಹೊಣೆಯಾಗಿದ್ದು, ಈ ಬಗ್ಗೆ ಪಂಚಾಯಿತಿ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳಲು ಪ್ರತಿಭಟನೆಯ ಹೊರತು ಬೇರೆ ದಾರಿ ಇಲ್ಲ ಎಂದು ತಿಳಿಸಿದರು.

ಸೆ.15ರಂದು ಬೃಹತ್ ಪ್ರತಿಭಟನಾ ಜಾಥಾ ನಡೆಸಿ ಮಂಜೇಶ್ವರ ಪಂಚಾಯಿತಿ ಮುಂಭಾಗದಲ್ಲಿ ಪ್ರತಿಭಟನಾ ಸಭೆ ನಡೆಸಲಾಗುವುದು. ಆ ಮೂಲಕ ್ಯಾಕ್ಟರಿ ಪರವಾನಗಿ ರದ್ದುಗೊಳಿಸುವ ಬಗ್ಗೆ ಒತ್ತಾಯಿಸಲು ನಿರ್ಧರಿಸಲಾಯಿತು.

ಮಧುಸೂದನ ಆಚಾರ್ಯ, ಪಂಚಾಯಿತಿ ಸದಸ್ಯರಾದ ಲಕ್ಷ್ಮಣ ಕುಚ್ಚಿಕಾಡ್ ಕಣ್ವತೀರ್ಥ, ತಲಪಾಡಿ ದೇವಾಡಿಗ ಸಂಘ ಅಧ್ಯಕ್ಷ ಜಯಂತ್ ಟಿ.ಪಿ.ಹೌಸ್, ಸುಕುಮಾರ್, ಸುನೀಲ್ ಡಿಸೋಜ, ಬಾಲಕೃಷ್ಣ, ಪ್ರದೀಪ್ ಕುಮಾರ್, ಪುಷ್ಪಲತಾ, ಸುಧಾಕರ, ನಾಗರಿಕ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಡಾ.ಚಂದ್ರಹಾಸ ಕಣ್ವತೀರ್ಥ ಸ್ವಾಗತಿಸಿದರು. ಪ್ರವೀಣ್ ಕುಂಞ್ಞಹಿತ್ತಿಲು ವಂದಿಸಿದರು.