ಹುಬ್ಬಳ್ಳಿ: ರಾಜ್ಯದಲ್ಲಿ ಹಿಜಾಬ್, ಹಲಾಲ್, ಜಟ್ಕಾ, ಮಾವು ಮಾರಾಟ, ಲೌಡ್ಸ್ಪೀಕರ್ ಇತ್ಯಾದಿ ವಿಚಾರಗಳಲ್ಲಿ ಕೋಮುಸಂಘರ್ಷ ಉಂಟಾಗಿ ಒಂದು ರೀತಿಯ ಆತಂಕದ ವಾತಾವರಣ ಮೂಡಿರುವ ಈ ಸಂದರ್ಭದಲ್ಲಿ ರಾಜ್ಯದ ಹುಬ್ಬಳ್ಳಿಯಲ್ಲಿ ಲವ್ ಜಿಹಾದ್ ಪ್ರಕರಣವೊಂದು ಕಂಡು ಬಂದಿದೆ.
ಹುಬ್ಬಳ್ಳಿಯ ಕೇಶ್ವಾಪುರದ ನಿವಾಸಿ ಇಬ್ರಾಹಿಂ ಹಾಗೂ ಹುಬ್ಬಳ್ಳಿಯ ಕಮರಿಪೇಟೆ ಯುವತಿ ಸ್ನೇಹಾ ನಡುವಿನ ಪ್ರೇಮಪ್ರಕರಣದಿಂದಾಗಿ ಯುವತಿಯ ಕಡೆಯವರು ಕೆರಳಿದ್ದು, ಹುಬ್ಬಳ್ಳಿಯ ಉಪನಗರ ಠಾಣೆ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ.
ಪ್ರೀತಿಯ ಹೆಸರಲ್ಲಿ ಯುವತಿಯ ತಲೆ ಕೆಡಿಸಿ ಮದುವೆಯಾಗಿ, ಮತಾಂತರಕ್ಕೆ ಹುನ್ನಾರ ಮಾಡಲಾಗಿದೆ ಎಂದು ಯುವತಿಯ ಕಡೆಯವರು ಮತ್ತು ಸಮಾಜದ ಮುಖಂಡರು ಆರೋಪಿಸಿದ್ದು, ಠಾಣೆ ಮುಂದೆ ಜಮಾಯಿಸಿ ಕ್ರಮಕ್ಕೆ ಆಗ್ರಹಿಸಿದ್ದಾರೆ.