ಬದಿಯಡ್ಕ: ಸಾಮಾಜಿಕ ಕಳಿಕಳಿಯ ಬೇಡಿಕೆಯೊಂದಿಗೆ ಸಂಘ ಪರಿವಾರ ಪ್ರತಿಭಟಿಸುತ್ತಿದೆ. ಪೊಲೀಸ್ ಇಲಾಖೆ ಜವಾಬ್ದಾರಿ ಸಮರ್ಪಕವಾಗಿ ನಿರ್ವಹಿಸದೇ ಇರುವುದು ಹಿಂದು ಸಮಾಜದ ಪ್ರತಿಭಟನೆಗೆ ಕಾರಣವಾಗಿದೆ. ಪೊಲೀಸ್ ಎಂದರೆ ಎಲ್ಲರಿಗೂ ಒಂದೇ ರೀತಿಯಲ್ಲಿರಬೇಕೇ ಹೊರತು ಜಾತಿ ಮತ ರಾಜಕೀಯ ತೋರಿಸುವಂತಿಲ್ಲ. ಕೇರಳದಲ್ಲಿ ಅತ್ಯುತ್ತಮವಾದ ಪೊಲೀಸ್ ಇಲಾಖೆಯಿತ್ತು. ಆದರೆ ಇಂದು ಇಲ್ಲಿನ ಅಧಿಕಾರಿಗಳ ಕಾರ್ಯ ಕೇರಳ ಪೊಲೀಸ್ ಇಲಾಖೆಯನ್ನೇ ತಲೆತಗ್ಗಿಸುವಂತೆ ಮಾಡಿದೆ ಎಂದು ಹಿಂದು ಐಕ್ಯವೇದಿ ಕೇರಳ ರಾಜ್ಯ ಕಾರ್ಯದರ್ಶಿ ಶ್ಯಾಮ್ ಮೋಹನ್ ಹೇಳಿದರು.
ಲವ್ ಜಿಹಾದ್‌ಗೆ ಬೆಂಬಲ ನೀಡಿದ ಬದಿಯಡ್ಕ ಠಾಣೆ ಪೊಲೀಸ್ ಅಧಿಕಾರಿಗಳ ಹಿಂದು ವಿರೋಧಿ ನೀತಿ ಖಂಡಿಸಿ ವಿಶ್ವಹಿಂದು ಪರಿಷತ್ ಬದಿಯಡ್ಕ ಪ್ರಖಂಡದ ನೇತೃತ್ವದಲ್ಲಿ ಶನಿವಾರ ಬದಿಯಡ್ಕ ಪೊಲೀಸ್ ಠಾಣೆಗೆ ನಡೆದ ಪ್ರತಿಭಟನಾ ಮಾರ್ಚ್‌ನ್ನು ಉದ್ಘಾಟಿಸಿ ಮಾತನಾಡಿದರು.
ಬಿಜೆಪಿ ಕಾಸರಗೋಡು ಮಂಡಲಾಧ್ಯಕ್ಷ ಹರೀಶ್ ನಾರಂಪಾಡಿ ಅಧ್ಯಕ್ಷತೆ ವಹಿಸಿದ್ದರು. ಬದಿಯಡ್ಕ ಗಣೇಶ ಮಂದಿರದಿಂದ ಪ್ರತಿಭಟನಾ ಮೆರವಣಿಯಲ್ಲಿ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು. ಪರಿವಾರ ಸಂಘಟನೆಗಳ ಪ್ರಮುಖರಾದ ಪವಿತ್ರನ್ ಕೆ.ಕೆ.ಪುರಂ, ಸಂಕಪ್ಪ ಭಂಡಾರಿ ಬಳ್ಳಂಬೆಟ್ಟು, ಸುರೇಶ್ ಶೆಟ್ಟಿ ಪರಂಕಿಲ, ಹರಿಪ್ರಸಾದ ರೈ, ಸುನೀಲ್ ಕಿನ್ನಿಮಾಣಿ, ಪ್ರದೀಪ್ ಎರಿಯಾಲ್, ಪಿ.ರಮೇಶ್ ಕಾಸರಗೋಡು, ಸುದಾಮ ಗೋಸಾಡ, ಅವಿನಾಶ್ ಬದಿಯಡ್ಕ, ಸಂತೋಷ್ ರೈ ಗಾಡಿಗುಡ್ಡೆ, ಶೈಲಜಾ ಭಟ್, ಶ್ರೀಧರ ಬೆಳ್ಳೂರು, ಎಂ.ಜನನಿ, ಮಣಿಕಂಠ ರೈ, ಗೋಪಾಲಕೃಷ್ಣ ಮುಂಡೋಳುಮೂಲೆ, ರವಿ ಬದಿಯಡ್ಕ, ಎಂ.ಕೆ.ರಾಘವ, ಲೀಲಾಕೃಷ್ಣ, ಸುಕುಮಾರ ಕುದ್ರೆಪ್ಪಾಡಿ ಪಾಲ್ಗೊಂಡಿದ್ದರು. ರಮೇಶ್ ಕೃಷ್ಣ ಪದ್ಮಾರು ಸ್ವಾಗತಿಸಿ, ವಾಮನ ಆಚಾರ್ಯ ವಂದಿಸಿದರು.