ಜಿಲ್ಲೆ

ಸಂಬಳ ಸಿಗದೆ ಶಿಕ್ಷಕಿ ಆತ್ಮಹತ್ಯೆ :ಕೆಪಿಎಸ್‌ಟಿಎ ಕುಂಬಳೆ ಉಪಜಿಲ್ಲಾ ಸಮಿತಿ ಪ್ರತಿಭಟನೆ

ಸೌಮ್ಯ ಆರ್

ಬದಿಯಡ್ಕ: ಸರ್ಕಾರಿ ಸೇವೆಗೆ ಸೇರ್ಪಡೆಗೊಂಡು ಆರು ವರ್ಷವಾದರೂ ನಿಯಮಾನುಸಾರ ವೇತನ ಲಭಿಸದೆ ಮನನೊಂದು ಕೋಝಿಕ್ಕೋಡ್ ಜಿಲ್ಲೆಯಲ್ಲಿ ಆತ್ಮಹತ್ಯೆಗೆ ಶರಣಾದ ಅಲೀನಾ ಟೀಚರ್ ಸಾವಿಗೆ ಕಾರಣರಾದವರನ್ನು ಶಿಕ್ಷಿಸಬೇಕೆಂದು ಆಗ್ರಹಿಸಿ ಕೆಪಿಎಸ್‌ಟಿಎ ಕುಂಬಳೆ ಉಪಜಿಲ್ಲಾ ಸಮಿತಿಯಿಂದ ಶುಕ್ರವಾರ ಕುಂಬಳೆ ಉಪಜಿಲ್ಲಾ ಸಹಾಯಕ ವಿದ್ಯಾಧಿಕಾರಿ(ಎಇಒ) ಕಚೇರಿ ಮುಂದೆ ಪ್ರತಿಭಟನೆ ನಡೆಯಿತು.

ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಪ್ರಶಾಂತ್ ಕಾನತ್ತೂರು ಉದ್ಘಾಟಿಸಿದರು. ಉಪಜಿಲ್ಲಾ ಅಧ್ಯಕ್ಷ ಲತೀಶನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಕೆ.ಗೋಪಾಲಕೃಷ್ಣನ್, ರಾಜ್ಯ ಕೌನ್ಸಿಲರ್ ಜಲಜಾಕ್ಷಿ ಪಿ., ಯೂಸುಫ್ ಕೊಟ್ಯಾಡಿ, ಮಲ್ಲಿಕಾ ಪಿ.ವಿ, ಸಂತೋಷ್ ಕ್ರಾಸ್ತಾ, ವಿನೋದ್ ನಂದಕುಮಾರ್, ರಮ್ಯಾ ಟಿ.ವಿ, ನಿರಂಜನ್ ರೈ, ಉಮೇಶ್ ಶೆಟ್ಟಿ, ರಾಮಕೃಷ್ಣನ್, ಅಂಬಿಕಾ, ಓಮನ ಪಿಲಾಂಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.