ಜಿಲ್ಲೆ

ಅದಾನಿ ಕೌಶಲಾಭಿವೃದ್ಧಿ ಕೇಂದ್ರ ಸ್ಥಾಪಿಸಲು ಪ್ರಸ್ತಾಪ

ಇಂದಿರಾ ಎನ್ ಕೆ

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ

ಸ್ಥಳೀಯ ಯುವಕರಿಗೆ ವೃತ್ತಿಪರ ತರಬೇತಿ ಮತ್ತು ಉದ್ಯೋಗಮುಖಿ ಕೌಶಲಗಳನ್ನು ಹೆಚ್ಚಿಸುವ ಸಲುವಾಗಿ ಪಂಚಾಯಿತಿ ಕಟ್ಟಡದಲ್ಲಿ ಅದಾನಿ ಕೌಶಲಾಭಿವೃದ್ಧಿ ಕೇಂದ್ರ ಸ್ಥಾಪಿಸಲು ಪ್ರಸ್ತಾಪ ಮಾಡುವುದಾಗಿ ಅದಾನಿ ಸಂಸ್ಥೆಯ ಕಾರ್ಯನಿವಾಹಕ ನಿರ್ದೇಶಕ ಕಿಶೋರ್ ಆಳ್ವ ತಿಳಿಸಿದರು.

ಅದಾನಿ ಫೌಂಡೇಶನ್ ಸಂಸ್ಥೆ, ಅದಾನಿ ಪವರ್ ಲಿಮಿಟೆಡ್ ಉಡುಪಿ ಟಿಪಿಪಿಯ 21.84 ಲಕ್ಷ ಸಿಎಸ್‌ಆರ್ ಅನುದಾದನದಲ್ಲಿ ನವೀಕರಿಸಿದ ಪಡುಬಿದ್ರಿ ಗ್ರಾಪಂ ಕಚೇರಿ ಸಭಾಂಗಣವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.

ಪಡುಬಿದ್ರಿ ಗ್ರಾಮ ಪಂಚಾಯಿತಿಗೆ ಸಿಎಸ್‌ಆರ್ ಅನುದಾನದಲ್ಲಿ ಈವರೆಗೆ 1.91 ಕೋಟಿ ರೂ. ವೆಚ್ಚದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಯೋಜನೆ ಅನುಷ್ಠಾನಿಸಲಾಗಿದೆ. ಗ್ರಾಪಂ ನೆಲಮಹಡಿ ಕಟ್ಟಡ ನಿರ್ಮಾಣ, ಪಾದೆಬೆಟ್ಟು ಗ್ರಾಮದಲ್ಲಿ ಸಮುದಾಯ ಭವನ, ರಸ್ತೆ ಕಾಂಕ್ರೀಟೀಕರಣ, ಸಾರ್ವಜನಿಕ ಶೌಚಗೃಹ ನಿರ್ಮಾಣ, ಕಂಚಿನಡ್ಕದಲ್ಲಿ ಸ್ಮಶಾನಕ್ಕೆ ಮೂಲ ಸೌಕರ್ಯ, ಸ್ಯಾನಿಟರಿ ಪ್ಯಾಡ್ ದಹನ ಘಟಕ ಸ್ಥಾಪನೆ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದರು.

ಗ್ರಾಪಂ ಅಧ್ಯಕ್ಷೆ ಶಶಿಕಲಾ ವೈ., ಉಪಾಧ್ಯಕ್ಷ ಹೇಮಚಂದ್ರ ಸಾಲ್ಯಾನ್, ಪಿಡಿಒ ಮಂಜುನಾಥ ಶೆಟ್ಟಿ, ಕಾರ್ಯದರ್ಶಿ ರೂಪಲತಾ, ಸದಸ್ಯರಾದ ರವಿ ಶೆಟ್ಟಿ, ಶೋಭಾ ಶೆಟ್ಟಿ, ವಿಜಯಲಕ್ಷ್ಮೀ ಆಚಾರ್ಯ, ನವೀನ್ ಶೆಟ್ಟಿ, ಗಣೇಶ ಕೋಟ್ಯಾನ್, ಸಂಜೀವಿ ಪೂಜಾರಿ, ಗೀತಾ ಪ್ರಭಾಕರ್, ಸುಜಾತ ಆಚಾರ್ಯ, ಭವಾನಿ, ಹರೀಶ್ ಶೆಟ್ಟಿ, ಸಂದೇಶ ಶೆಟ್ಟಿ, ಅಶೋಕ ಪೂಜಾರಿ, ಫಿರೋಜ್, ಅಜೀಜ್, ಅದಾನಿ ಪವರ್ ಲಿಮಿಟೆಡ್‌ನ ಎಜಿಎಂ ರವಿ ಆರ್.ಜೇರೆ, ಅದಾನಿ ಫೌಂಡೇಶನ್‌ನ ಅನುದೀಪ್ ಉಪಸ್ಥಿತರಿದ್ದರು.