ಜಿಲ್ಲೆ

ಕಾಂಗ್ರೆಸ್ ನಾಯಕರ ಫ್ಲೆಕ್ಸ್ ಹರಿದು ಹಾಕಿದ ಕನ್ನಡ ಪರ ಸಂಘಟನೆ ಸದಸ್ಯರು

Webdesk - Manjunatha B

ಬೆಂಗಳೂರು: 2024ರ ಲೋಕಸಭೆ ಚುನಾವಣೆಯ್ಲಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವನ್ನು ಮಣಿಸಲು ಒಟ್ಟಾಗಿರುವ ಸಮಾನ ಮನಸ್ಕ ವಿರೋಧ ಪಕ್ಷಗಳು ಜುಲೈ 17-18ರಂದು ಬೆಂಗಳೂರಿನಲ್ಲಿ ಸಭೆ ನಡೆಸಲಿವೆ.

ಇನ್ನು ವಿರೋಧ ಪಕ್ಷದ ನಾಯಕರ ಸ್ವಾಗತಕ್ಕೆ ನಗರದ ತುಂಬೆಲ್ಲಾ ಬ್ಯಾನರ್​ಗಳನ್ನು ಹಾಕಲಾಗಿದ್ದು, ಇದನ್ನು ಕನ್ನಡ ಪರ ಸಂಘಟನೆಯ ಸದಸ್ಯರುಗಳು ಹರಿದು ಹಾಕಿದ್ದಾರೆ.

ವಿರೋಧ ಪಕ್ಷದ ನಾಯಕರ ಸ್ವಾಗತಕ್ಕೆ ಹಾಕಲಾಗಿದ್ದ್ ಬ್ಯಾನರ್​​ಗಳಲ್ಲಿ ಕನ್ನಡವನ್ನು ಬಳಸದೆ ಇಂಗ್ಲೀಷ್​ ಬಳಸಲಾಗಿದೆ. ಕನ್ನಡ ಬಳಸದಿದ್ದರೆ ಮಸಿ ಬಳಿಯುವುದಾಗಿ ಸಂಘಟನೆಯ ಸದಸ್ಯರು ಎಚ್ಚರಿಕೆ ನೀಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.