ಜಿಲ್ಲೆ

Prison sentence ಬಾಲಕಿ ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ ದುರುಳನಿಗೆ 20 ವರ್ಷ ಜೈಲು

Uttara Kannada - Subash Hegde

ಶಿರಸಿ Prison sentence: ಬಾಲಕಿಯನ್ನು ಅಪಹರಿಸಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಿ ಜಿಲ್ಲಾ ಮಕ್ಕಳ ವಿಶೇಷ ನ್ಯಾಯಾಲಯ ಆದೇಶ ಮಾಡಿದೆ.

ಸುನೀಲ ಸುರೇಶ ಬೋವಿವಡ್ಡರ್ ಬಾಲಕಿಯನ್ನು ಪುಸಲಾಯಿಸಿ, ಅಪಹರಣ ಮಾಡಿಕೊಂಡು ಹೋಗಿ ಲೈಂಗಿಕ ದೌರ್ಜನ್ಯ ನಡೆಸಿದ್ದ. ಶಿರಸಿ ಆಗಿನ ಸಿಪಿಐ ರಾಮಚಂದ್ರ ನಾಯಕ ಆತನನ್ನು ಬಂಽಸಿ, ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಎರಡೂ ಪ್ರಕರಣಗಳಲ್ಲಿ ವಿಶೇಷ ಸರ್ಕಾರಿ ಅಭಿಯೋಜಕಿ ಶುಭಾ ಗಾಂವಕರ್ ಹಾಗೂ ಪ್ರಧಾನ ಸರ್ಕಾರಿ ಅಭಿಯೋಜಕಿ ತನುಜಾ ಹೊಸಪಟ್ಟಣ ಅವರು ವಾದ ಮಂಡಿಸಿದ್ದರು.

Prison sentence

ಶಿರಸಿ ಬನವಾಸಿ ಸಮೀಪದ ಕುಪ್ಪಗಡ್ಡೆ ಗ್ರಾಮದ ಸುನೀಲ ಸುರೇಶ ಬೋವಿವಡ್ಡರ್ ಎಂಬ ಅಪರಾಧಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂ. ದಂಡವನ್ನು ವಿಶೇಷ ಮಕ್ಕಳ ಸ್ನೇಹಿ ನ್ಯಾಯಾಲಯದ ನ್ಯಾಯಾಧೀಶರಾದ ಪ್ರತಿಭಾ ಬಂಡುರಾವ ಕುಲಕರ್ಣಿ ಅವರು  ವಿಧಿಸಿದ್ದಾರೆ.