ಜಿಲ್ಲೆ

ಕೊಂಕಣ ರೈಲ್ವೆ ಅಭಿವೃದ್ಧಿಗೆ ಆದ್ಯತೆ

ಇಂದಿರಾ ಎನ್ ಕೆ

ಕುಂದಾಪುರ: ಕೊಂಕಣ ರೈಲ್ವೆ ಭಾಗದಲ್ಲಿ ರೈಲುಗಳಿಗೆ ನೀರು ತುಂಬುವ ಹಾಗೂ ಪಾರ್ಕ್ ಮಾಡುವ ವ್ಯವಸ್ಥೆ, ಉಡುಪಿ ರೈಲು ನಿಲ್ದಾಣಕ್ಕೆ ದುರಂತೋ ಮತ್ತು ಹಮ್ ಸಪರ್ ರೈಲುಗಳ ನಿಲುಗಡೆ ಸೇರಿದಂತೆ ಹಲವು ಅಭಿವೃದ್ಧಿ ಪರ ಸಲಹೆ ಕೊಂಕಣ ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸಭೆಯಲ್ಲಿ ಕೊಂಕಣ ರೈಲ್ವೆ ಸಲಹಾ ಸಮಿತಿ ಸದಸ್ಯ ಗಣೇಶ್ ಪುತ್ರನ್ ಚರ್ಚಿಸಿದರು.

ಮಂಗಳೂರು ಬೆಂಗಳೂರು ಘಾಟ್ ಮಾರ್ಗದ ಕ್ರಾಸಿಂಗ್ ವ್ಯವಸ್ಥೆ ಸುಧಾರಣೆ ಮಾಡಲು ನೈರುತ್ಯ ರೈಲ್ವೆ ಜತೆ ಸಂವಹನ ಸೇರಿ ಕರಾವಳಿ ಭವಿಷ್ಯದ ರೈಲು ಕಲ್ಪನೆ ನಿಗಮದ ಮುಂದೆ ಚರ್ಚಿಸಲಾಯಿತು.

ಕೊಂಕಣ ರೈಲ್ವೆ ವಿಲೀನವಾಗದೇ ಅದಕ್ಕೆ ಬಜೆಟ್ ಅನುದಾನ ಬಾರದು. ಬಜೆಟ್ ಅನುದಾನ ಇಲ್ಲದೆ ಡಬ್ಲಿಂಗ್ ಮಾಡಲಾಗುತ್ತಿಲ್ಲ.ದೇಶಾದ್ಯಂತ ದಟ್ಟಣೆ ಕಾರಣದಿಂದ ಮಾರ್ಗಗಳು ಡಬಲ್ ಆಗುತಿದ್ದು ಹೊಸ ಹೊಸ ಅತೀ ವೇಗದ ರೈಲು ಆರಂಭವಾಗುತ್ತಿದೆ. ಕೊಂಕಣ ಮಾರ್ಗದ ಪ್ರಯಾಣಿಕರು ನಿಗಮ ಮತ್ತು ಭಾರತೀಯ ರೈಲ್ವೆ ಗೊಂದಲದ ನಡುವೆ ಅಭಿವೃದ್ಧಿಯಿಂದ ವಂಚಿತರಾಗಿದ್ದು, ಈ ಬಗ್ಗೆ ಸಾರ್ವಜನಿಕರಿಗಾಗುತ್ತಿರುವ ಸಮಸ್ಯೆ ಗಮನಿಸಿ ತಕ್ಷಣವೇ ಡಬ್ಲಿಂಗ್ ಮಾಡಲು ಕ್ರಮ ಕೈಗೊಳ್ಳುವಂತೆ ಗಣೇಶ್ ಪುತ್ರನ್ ಮನವಿ ಮಾಡಿದರು.

ಕಾರವಾರ ಬೆಂಗಳೂರು ನಡುವೆ ಹೊಸ ರಾತ್ರಿ ರೈಲು, ರೈಲ್ವೆ ಭದ್ರತಾ ಪಡೆಯ ಸಶಕ್ತೀಕರಣ ಸೇರಿದಂತೆ ಕರಾವಳಿ ವಿವಿಧ ರೈಲು ನಿಲ್ದಾಣ ಅಭಿವೃದ್ಧಿಗೆ ಕ್ರಮಕೈಗೊಳ್ಳಲು ಸಲಹೆ ನೀಡಿದ ಅವರು ಸಲಹೆಗಳಿಗೆ ಕೊಂಕಣ ನಿಗಮ ಸಕಾರಾತ್ಮಕವಾಗಿ ಸ್ಪಂದಿಸಿದು, ರೈಲಿಗೆ ನೀರು ತುಂಬುವ ವ್ಯವಸ್ಥೆ ಸೇರಿದಂತೆ ಹಲವು ಕಾರ್ಯಗಳಿಗೆ ಸಂಬಂಧಪಟ್ಟ ಕೆಲಸ ಆರಂಭಿಸುವುದಾಗಿ ಕೊಂಕಣ ನಿಗಮ ಆಡಳಿತ ನಿರ್ದೇಶಕರು ಭರವಸೆ ನೀಡಿದ್ದಾರೆ. ಕಾರವಾರ, ಗೋವಾ, ಮಹಾರಾಷ್ಟ್ರ, ಕೇರಳದ ಸಂಸದರೂ ಸೇರಿದಂತೆ ಸಲಹಾ ಸಮಿತಿ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.