ಕಂಪ್ಲಿ: ವಿದ್ಯಾರ್ಥಿನಿಯರು ಉನ್ನತ ಶಿಕ್ಷಣ ಹಾಗೂ ಹುದ್ದೆ ಗಳಿಸಿ ಜಾಗೃತರಾಗಬೇಕು ಎಂದು ಎಸ್‌ಜಿವಿಎಸ್‌ಎಸ್ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಮಹಮ್ಮದ್ ಶಫಿ ಹೇಳಿದರು.
ಇದನ್ನೂ ಓದಿ:ಶಿಕ್ಷಣದ ಜತೆಗೆ ಸಂಸ್ಕಾರ ನೀಡಿ
ನಗರದ ಎಸ್‌ಜಿವಿಎಸ್‌ಎಸ್ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪ್ರತಿಭಾಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ಕುಟುಂಬದ ಜಂಜಾಟದಲ್ಲಿ ಶಿಕ್ಷಣ ಮೊಟುಕುಗೊಳಿಸದೆ, ಹಿಂಜರಿಕೆ ಬಿಟ್ಟು ಗುಣಮಟ್ಟದ ಶಿಕ್ಷಣಕ್ಕೆ ಪಡೆಯಬೇಕು ಎಂದು ವಿದ್ಯಾರ್ಥಿನಿಯರಿಗೆ ಸಲಹೆ ನೀಡಿದರು.
ಹೆಚ್ಚು ಅಂಕಗಳಿಸಿದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾದ ಕಲಾ ವಿಭಾಗದ ಬಿ.ಉಷಾ, ವಾಣಿಜ್ಯ ವಿಭಾಗದ ಜಿ.ಭೂಮಿಕಾ, ವಿಜ್ಞಾನ ವಿಭಾಗದ ಪಿ.ನಮ್ರತಾ, ಎಂ.ಮೇಘನಾ, ಪ್ರಥಮ ಪಿಯುಸಿ ಕಲಾ ವಿಭಾಗದ ಗಾಯತ್ರಿ, ವಾಣಿಜ್ಯ ವಿಭಾಗದ ಕೆ.ನಾಗರತ್ನಾ, ವಿಜ್ಞಾನ ವಿಭಾಗದ ಕೆ.ಎಂ.ಕಾಂಚನಾ ಅವರಿಗೆ ಜೆಸ್ಕಾಂ ಎಇಇ ಮಲ್ಲಿಕಾರ್ಜುನ ಗೌಡ ಪ್ರತಿಭಾ ಪುರಸ್ಕಾರ ವಿತರಿಸಿದರು. ವರ್ಗವಣೆಯಾದ ಎಸ್‌ಡಿಎ ವೀರೇಶ್ ಅವರನ್ನು ಬೀಳ್ಕೊಡಲಾಯಿತು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾಲೇಜು ಭೂದಾನಿ ಗೌಡ್ರು ಗೋಪಾಲಕೃಷ್ಣ, ಪುರಸಭೆ ಸದಸ್ಯೆ ಹೇಮಾವತಿ ಪೂರ್ಣಚಂದ್ರ, ಪ್ರಮುಖರಾದ ವಿನೋದ್ ಬ್ಯಾಲಾಳ್, ಡಾ.ವಿ.ಚಂದ್ರಶೇಖರ ಬಿಳೇಗುಡ್ಡ, ಪಂಪಾಪತಿ, ಶ್ರೀಪಾದ ರಾವ್ ಗುಮಾಸ್ತೆ, ಚಂದ್ರಶೇಖರ್, ವಾಮದೇವಮೂರ್ತಿ, ಮಾರೆಪ್ಪ, ಜಗದೀಶ, ನಿರಂಜನ ಅಂಗಡಿ, ಗಜೇಂದ್ರ, ರಾಮಪ್ಪ, ರೇಖಾ, ಭವಾನಿ, ಶಹಜಾನ್ ಇತರರಿದ್ದರು.