ಕುರುಗೋಡಿನ ತಾಲೂಕು ಆಡಳಿತ ಕಚೇರಿಯಲ್ಲಿ ಬಾಬು ಜಗಜೀವನರಾಮ್ ಜಯಂತಿ ಆಚರಿಸಲಾಯಿತು. ತಹಸೀಲ್ದಾರ್ ನರಸಪ್ಪ ಪುರಸಭೆ ಅಧ್ಯಕ್ಷ ಶೇಖಣ್ಣ, ಉಪಾಧ್ಯಕ್ಷ ಚನ್ನಪಟ್ಟಣ ಮಲ್ಲಿಕಾರ್ಜುನ, ಅಂಬೇಡ್ಕರ್ ಸಂಘದ ಅಧ್ಯಕ್ಷ ಸಿದ್ದಪ್ಪ, ಗೌರವಾಧ್ಯಕ್ಷ ರುದ್ರಪ್ಪ, ತಾಪಂ ಕಾರ್ಯ ನಿರ್ವಹಣಾಧಿಕಾರಿ ನಿರ್ಮಲಾ ಪ್ರಮುಖರಾದ ಶಿವಶಂಕರಪ್ಪ, ಡಾ.ಶಶಿಕಾಂತ್ ಇತರರಿದ್ದರು. 
ಜಿಲ್ಲೆ

ತತ್ವಗಳನ್ನು ಪ್ರತಿಯೊಬ್ಬರೂ ಪಾಲಿಸಿ

Kopala - Desk - Eraveni

ಕುರುಗೋಡು: ದೇಶದ ರಾಜಕೀಯ, ಸಾಮಾಜಿಕ, ಆರ್ಥಿಕ ಬದಲಾವಣೆಗೆ ಬಾಬು ಜಗಜೀವನರಾಮ್ ಕೊಡುಗೆ ಅಪಾರ ಎಂದು ತಹಸೀಲ್ದಾರ್ ನರಸಪ್ಪ ಅಭಿಪ್ರಾಯಪಟ್ಟರು.

ಪಟ್ಟಣದ ತಾಲೂಕು ಆಡಳಿತ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಬಾಬು ಜಗಜೀವನರಾಮ್ ಜಯಂತಿ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು. ದೀನ ದಲಿತರ ಏಳಿಗೆಗಾಗಿ ಸದಾ ಶ್ರಮಿಸುತ್ತಿದ್ದ ಅವರ ಸಾಮಾಜಿಕ ಕಳಕಳಿ ಜತೆಗೆ ತತ್ವಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದರು.

ಪುರಸಭೆ ಅಧ್ಯಕ್ಷ ಶೇಖಣ್ಣ ಮಾತನಾಡಿ, ಬಾಬು ಜಗಜೀವನರಾಮ್ ದಕ್ಷ ಹಾಗೂ ಉತ್ತಮ ರಾಜಕಾರಣಿ ಅಷ್ಟೇ ಅಲ್ಲದೆ ಮತ್ಸದ್ದಿ ಆಡಳಿತಗಾರರು. ಪರರಿಗಾಗಿ ಸೇವೆ ಸಲ್ಲಿಸುವುದು ಹೇಗೆ ಎನ್ನುವುದನ್ನು ತಮ್ಮ ಜೀವನ ಶೈಲಿಯಿಂದ ತಿಳಿಸಿಕೊಟ್ಟವರು ಎಂದರು.

ಪುರಸಭೆ ಉಪಾಧ್ಯಕ್ಷ ಚನ್ನಪಟ್ಟಣ ಮಲ್ಲಿಕಾರ್ಜುನ, ಅಂಬೇಡ್ಕರ್ ಸಂಘದ ಅಧ್ಯಕ್ಷ ಸಿದ್ದಪ್ಪ, ಗೌರವಾಧ್ಯಕ್ಷ ರುದ್ರಪ್ಪ, ತಾಪಂ ಕಾರ್ಯ ನಿರ್ವಹಣಾಧಿಕಾರಿ ನಿರ್ಮಲಾ ಪ್ರಮುಖರಾದ ಶಿವಶಂಕರಪ್ಪ, ಡಾ.ಶಶಿಕಾಂತ್ ಇತರರಿದ್ದರು.