ಕುಂದಾಪುರದಲ್ಲಿ ನಡೆದ ಅಸಂಘಟಿತ ಕಾರ್ಮಿಕರ ಸಮಾವೇಶ ಉದ್ಘಾಟಿಸಿ ಸುರೇಶ್ ಕಲ್ಲಾಗರ ಮಾತನಾಡಿದರು. ರಮೇಶ್, ನರಸಿಂಹ ಸಹಿತ ಪ್ರಮುಖರು ಇದ್ದರು.  
ಜಿಲ್ಲೆ

ಸೌಲಭ್ಯಗಳಿಗಾಗಿ ಸರ್ಕಾರಕ್ಕೆ ಒತ್ತಡ ಹೇರಿ

ಇಂದಿರಾ ಎನ್ ಕೆ

ಗಂಗೊಳ್ಳಿ: ಸಿಐಟಿಯು ನಡೆಸಿದ ಹಲವು ಸಾರ್ವತ್ರಿಕ ಮುಷ್ಕರದ ಬಳಿಕ ಸಾರಿಗೆ ನೌಕರರಿಗೆ ಕಲ್ಯಾಣ ಮಂಡಳಿ ರಚನೆಯಾಗಿದೆ. ಆದರೆ ಸೌಲಭ್ಯಗಳು ಪಡೆಯಲು ಹಾಗೂ ರಕ್ಷಿಸಿಕೊಳ್ಳಲು ಸರ್ಕಾರಗಳ ಮೇಲೆ ಒತ್ತಡ ಹೇರಲು ಸಂಘಟಿತರಾಗಬೇಕು ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಹೇಳಿದರು.

ಕುಂದಾಪುರ ಹೆಂಚು ಕಾರ್ಮಿಕರ ಭವನದಲ್ಲಿ ಭಾನುವಾರ ಅಸಂಘಟಿತ ಕಾರ್ಮಿಕರ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ರಿಕ್ಷಾ ಮತ್ತು ವಾಹನ ಚಾಲಕರ ಸಂಘದ ಅಧ್ಯಕ್ಷ ರಮೇಶ್ ವಿ, ಸಿಐಟಿಯು ಮುಖಂಡ ಎಚ್.ನರಸಿಂಹ ಮಹಾಬಲ ವಡೇರಹೋಬಳಿ ಶುಭಹಾರೈಸಿದರು. ಕೆ.ಶಂಕರ್ ಅಧ್ಯಕ್ಷತೆ ವಹಿಸಿದ್ದರು. ಸಿಐಟಿಯು ಸಂಚಾಲಕ ಚಂದ್ರಶೇಖರ ವಿ ನೋಂದಣಿ ಬಗೆ ಹಾಗೂ ಸೌಲಭ್ಯಗಳ ಮಾಹಿತಿ ಪಡೆದುಕೊಳ್ಳುವಂತೆ ಕರೆ ನೀಡಿದರು. ರವಿ ವಿ.ಎಂ ಅತಿಥಿಗಳನ್ನು ಗೌರವಿಸಿದರು. ರಾಜು ದೇವಾಡಿಗ ಸ್ವಾಗತಿಸಿದರು. ಮಂಜುನಾಥ ಶೋಗನ್ ವಂದಿಸಿದರು.

ಕುಂದಾಪುರದಲ್ಲಿ ನಡೆದ ಅಸಂಘಟಿತ ಕಾರ್ಮಿಕರ ಸಮಾವೇಶ ಉದ್ಘಾಟಿಸಿ ಸುರೇಶ್ ಕಲ್ಲಾಗರ ಮಾತನಾಡಿದರು. ರಮೇಶ್, ನರಸಿಂಹ ಸಹಿತ ಪ್ರಮುಖರು ಇದ್ದರು.