ಜಿಲ್ಲೆ

ಎಲೆಚುಕ್ಕಿ ರೋಗಕ್ಕೆ ಪೋಷಕಾಂಶ ಕೊರತೆ ಕಾರಣ : ಕೃಷಿ ವಿಜ್ಞಾನಿ ಡಾ.ಬಿ.ಕೆ.ವಿಶು ಕುವಾರ್ ಮಾಹಿತಿ

ಸೌಮ್ಯ ಆರ್

ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ ಅಡಕೆ ಕೃಷಿಕರು ಎಲೆಚುಕ್ಕಿ ರೋಗದ ಬಗ್ಗೆ ಆತಂಕಕ್ಕೀಡಾದರೂ ಅಡಕೆ ಮರಕ್ಕೆ ಪೋಷಕಾಂಶಗಳನ್ನು ನೀಡಿದ್ದಲ್ಲಿ ಎಲೆಚುಕ್ಕಿ ರೋಗ ದೂರವಾಗುತ್ತದೆ ಎಂದು ಕೃಷಿ ವಿಜ್ಞಾನಿ ಡಾ.ಬಿ.ಕೆ.ವಿಶುಕುವಾರ್ ಸಲಹೆ ನೀಡಿದರು.

ಸುಳ್ಯದಲ್ಲಿ ಗೋಷ್ಠಿಯಲ್ಲಿ ಮಾತನಾಡಿ, ಎಲೆಚುಕ್ಕಿ ತೀವ್ರವಾದ ಶಿಲೀಂಧ್ರ ರೋಗವಾಗಿದ್ದು, ಇದು ಅಡಕೆ ಎಲೆಗಳ ಮೇಲೆ ಮತ್ತು ಅಡಕೆಗಳ ಮೇಲೆ ಪರಿಣಾಮ ಬೀರುವುದರೊಂದಿಗೆ ಗಮನಾರ್ಹ ಇಳುವರಿ ನಷ್ಟವಾಗುತ್ತದೆ. ಎಲೆಚುಕ್ಕಿ ಬಾಧಿತ ಗರಿಗಳನ್ನು ತೆಗೆದು ಸುಟ್ಟು ಹಾಕಬೇಕು. ಶಿಲೀಂಧ್ರ ನಾಶಕ ಸಿಂಪಡಿಸಬೇಕು. ಬೋರ್ಡೋ ದ್ರಾವಣ ಮತ್ತು ಪೋಷಕಾಂಶ ಸಿಂಪಡಣೆ ಮಾಡಬೇಕು. ನೀರು ನಿಲ್ಲದಂತೆ ಚರಂಡಿ ವ್ಯವಸ್ಥೆ ಮಾಡಬೇಕು. ಮಣ್ಣಿನ ಪಿ.ಎಚ್. ಕಾಪಾಡಬೇಕು. ಅಡಕೆ ಮರದ ರೋಗ ನಿರೋಧಕ ಶಕ್ತಿ ಹೆಚ್ಚಿಸಬೇಕು. ಗೊಬ್ಬರದೊಂದಿಗೆ ಪೋಷಕಾಂಶ ನೀಡಿದಾಗ ಎಲೆಚುಕ್ಕಿ ರೋಗ ಬಾಧಿಸುವುದಿಲ್ಲ ಎಂದು ವಿವರಿಸಿದರು.

ರೈತ ಉತ್ಪಾದಕರ ಕಂಪನಿಯ ಅಧ್ಯಕ್ಷ ವೀರಪ್ಪ ಗೌಡ, ಕೃಷಿಕರಾದ ಲೋಕಯ್ಯ ಗೌಡ ಅತ್ಯಾಡಿ, ರಾಮಚಂದ್ರ ಪೆಲ್ತಡ್ಕ, ರಶೀದ್ ಜಟ್ಟಿಪಳ್ಳ ಉಪಸ್ಥಿತರಿದ್ದರು.