ತಾವರಗೇರಾ ಸಮೀಪದ ಮೆಣೇಧಾಳ ಗ್ರಾಪಂಗೆ ಅಧ್ಯಕ್ಷೆ ಅನ್ನಪೂರ್ಣಮ್ಮ ಬಜಂತ್ರಿ, ಉಪಾಧ್ಯಕ್ಷರಾಗಿ ಯಂಕಪ್ಪ ಗರಜನಾಳ ಆಯ್ಕೆ ಯಾದರು 
ಜಿಲ್ಲೆ

ಅಧ್ಯಕ್ಷೆ ಸ್ಥಾನ ಅಲಂಕರಿಸಿದ ಅನ್ನಪೂರ್ಣಮ್ಮ ಬಜಂತ್ರಿ

ತಾವರಗೇರಾ: ಸಮೀಪದ ಮೆಣೇಧಾಳ ಗ್ರಾಪಂ ಎರಡನೆ ಅವಧಿಗೆ ಅಧ್ಯಕ್ಷೆ ಅನ್ನಪೂರ್ಣಮ್ಮ ಬಜಂತ್ರಿ, ಉಪಾಧ್ಯಕ್ಷರಾಗಿ ಯಂಕಪ್ಪ ಗರಜನಾಳ ಆಯ್ಕೆಯಾದರು.


ಒಟ್ಟು 19 ಸದಸ್ಯರನ್ನು ಹೊಂದಿದ ಮೆಣೇಧಾಳ ಗ್ರಾಪಂಯಲ್ಲಿ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಿದ್ದು, ಅನ್ನಪೂರ್ಣಮ್ಮ ಬಜಂತ್ರಿ, ಲಕ್ಷ್ಮಮ್ಮ ನಾಮಪತ್ರ ಸಲ್ಲಿಸಿದ್ದರು. ಲಕ್ಷಮ್ಮ 3, ಅನ್ನಪೂರ್ಣಮ್ಮ ಬಜಂತ್ರಿ 12 ಮತ ಪಡೆದು ಅಧ್ಯಕ್ಷೆಯಾಗಿ ಆಯ್ಕೆಯಾದರು. 4 ಜನ ಸದಸ್ಯರು ಗೈರಾಗಿದ್ದರು. ಉಪಾಧ್ಯಕ್ಷ ಯಂಕಪ್ಪ ಗರಜನಾಳ ವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಸೂಗಪ್ಪ ಘೋಷಿಸಿದರು.


ಸಹಾಯಕ ಚುನಾವಣಾ ಅಧಿಕಾರಿಗಳಾಗಿ ಎಇಇ ರಾಜಶೇಖರ ಕಟ್ಟಿಮನಿ, ಪಿಡಿಒ ಬಸವರಾಜ ರಾವಣಿಕಿ , ಕಾರ್ಯದರ್ಶಿ ಮಂಜುನಾಥ ಬಡಿಗೇರ, ಪಿಎಸ್‌ಐ ತಿಮ್ಮಣ್ಣ ನಾಯಕ, ಎಎಸ್‌ಐ ಶಿವಪುತ್ರಪ್ಪ, ಈರಪ್ಪ ಸಿಬ್ಬಂದಿಗಳಾದ ವೀರೇಶ, ಕರಿಯಪ್ಪ, ಆನಂದ, ಯಮನೂರಪ್ಪ ಪ್ರಮುಖರಾದ ಬಬ್ರುವಾಹನ ಗುಳೇದ, ಶಿವಮೂರ್ತೆಪ್ಪ ಬಜಂತ್ರಿ, ಮಹಿಬೂಬಸಾಬ ಮೆಣೇಧಾಳ, ಶಾಂತಪ್ಪ ದಿವಟರ್, ಶೇಖರಪ್ಪ ಉಳ್ಳಾಗಡ್ಡಿ, ಛತ್ರಪ್ಪ ಪಾಳೇದ, ತುಳಜಾರಾಮ್ ಸಿಂಗ್, ವೆಂಕಟೇಶ ಮರಕುಂಬಿ, ಉಮೇಶ, ಬಸವರಾಜ ಇತರರಿದ್ದರು.