ಹೇಮನಾಥ್ ಪಡುಬಿದ್ರಿ ಅವಧಿಗೆ ಮೊದಲೇ ಈ ಬಾರಿ ಮಳೆಗಾಲ ಆರಂಭಗೊಂಡು ತಿಂಗಳು ಕಳೆದಿದ್ದು, ಕಾಪು ತಾಲೂಕಿನಲ್ಲಿ ಮುಂಗಾರು ಹಂಗಾಮಿನ ಭತ್ತದ ಬೇಸಾಯವೂ ಚುರುಕುಗೊಂಡಿದೆ. ಯಂತ್ರೋಪಕರಣಗಳನ್ನು ಬಳಸಿ ಗದ್ದೆ ಹದಗೊಳಿಸಿ ನೇಜಿ ತಯಾರಿ ಹಾಗೂ ಭತ್ತ ಬಿತ್ತನೆ ಕಾರ್ಯ ಬಿರುಸಿನಿಂದ ನಡೆಯುತ್ತಿದೆ. ಪ್ರಸ್ತುತ ಹಂಗಾಮಿನಲ್ಲಿ 2800 ಹೆಕ್ಟೇರ್‌ನಲ್ಲಿ ಭತ್ತ ಬೇಸಾಯ ಗುರಿಯನ್ನು ಕೃಷಿ ಇಲಾಖೆ ಹೊಂದಿದೆ. ತಾಲೂಕಿನಲ್ಲಿ ಈ ಬಾರಿಯೂ ಎಂಒ4 ತಳಿ ಭತ್ತದ ಬೀಜಕ್ಕೆ ಹೆಚ್ಚಿನ ಬೇಡಿಕೆ ಕಂಡು ಬಂದಿದ್ದು, ಮೇ ತಿಂಗಳಿನಲ್ಲಿ 130 ಕ್ವಿಂಟಾಲ್ ಹಾಗೂ ಜೂನ್ ತಿಂಗಳಿನಲ್ಲಿ 110 ಕ್ವಿಂಟಾಲ್ ಬೀಜ ವಾರಾಟವಾಗಿದೆ. ರೈತ ಸಂಪರ್ಕ ಕೇಂದ್ರದಲ್ಲಿ ಬೇಡಿಕೆಗನುಗುಣವಾಗಿ ಎಂಒ4 ಬೀಜದೊಂದಿಗೆ ಜ್ಯೋತಿ ತಳಿ ಬೀಜವೂ ಲಭ್ಯವಿದೆ. ಭಾರಿ ಮಳೆಯಿಂದ ನೆರೆ ಉಂಟಾಗಿ ಭತ್ತದ ಸಸಿ ಮಡಿಗಳು ಹಾನಿಗೀಡಾಗಿದ್ದವು. ಹಾನಿಗೊಳಗಾದ ರೈತರು ಬೀಜ ಖರೀದಿಸಲು ಮತ್ತೆ ರೈತ ಸಂಪರ್ಕ ಕೇಂದ್ರದತ್ತ ಮುಖ ವಾಡುತ್ತಿದ್ದಾರೆ. * ಇಳಿಕೆಯತ್ತ ಸಾಗುತ್ತಿದೆ ಭತ್ತ ಬೇಸಾಯ: 5 ವರ್ಷಗಳ ಹಿಂದೆ ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ 3147 ಹೆಕ್ಟೇರ್ ಭತ್ತ ಬೇಸಾಯವಾಗುತ್ತಿತ್ತು. ಪ್ರಸ್ತುತ ಅದು 2800 ಹೆಕ್ಟೇರ್‌ಗೆ ಇಳಿಕೆಯಾಗಿದ್ದು, ಕರೋನಾ ಸಂದರ್ಭದಲ್ಲಿ ಹಡಿಲು ಭೂಮಿ ಬೇಸಾಯ ಹೆಚ್ಚಳವಾಗಿದ್ದರೂ, ಇದೀಗ ಮತ್ತೆ ಹಡಿಲು ಭೂಮಿ ಹೆಚ್ಚಳ ಕಂಡು ಬರುತ್ತಿದೆ. ಯಂತ್ರೋಪಕರಣಗಳ ದುಬಾರಿ ಬಾಡಿಗೆ, ಕೂಲಿಕಾರ್ಮಿಕರ ಕೊರತೆಯಿಂದ ರೈತರು ಭತ್ತದ ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಕೃಷಿ ಜಮೀನುಗಳು ಕೈಗಾರಿಕೆ ಮತ್ತು ಭೂ ಪರಿವರ್ತನೆಗೊಂಡು ನಿವೇಶನಗಳಾಗಿ ವಾರ್ಪಾಡುಗೊಳ್ಳುತ್ತಿದೆ. ಹಡಿಲು ಭೂಮಿ ಬೇಸಾಯಗಾರರಿಗೆ ಬೇಕಿದೆ ಪ್ರೋತ್ಸಾಹ: ಭೂಮಿಯಿಲ್ಲದಿದ್ದ ಕೆಲ ಯುವಕರು ಭೂಮಿ ಎರವಲು ಪಡೆದು ಭತ್ತದ ಬೇಸಾಯಕ್ಕೆ ಮುಂದಾದರೂ, ಜಮೀನು ವಾಲೀಕರು ಕೇವಲ ಭೂಮಿ ಎರವಲು ನೀಡಿ ಸುಮ್ಮನಾಗುತ್ತಾರೆ. ಅತ್ತ ರಿಯಾಯಿತಿ ದರದಲ್ಲಿ ಬೀಜ ಪಡೆಯಲಾಗದೆ ಎರವಲು ಭೂಮಿ ಪಡೆದವರು ಬೀಜ ಖರೀದಿಸಲು ಭೂ ವಾಲೀಕರು ಸಹಕಾರ ನೀಡಿ ಪ್ರೋತ್ಸಾಹಿಸಬೇಕಿದೆ.
ರೈತರ ಬೇಡಿಕೆಯಂತೆ ಕೃಷಿ ಇಲಾಖೆಯು ಕಜೆ ಜಯ ಭತ್ತ ತಳಿಯನ್ನು ಪ್ರಾಯೋಗಿಕವಾಗಿ ಶಿರ್ವ ಗ್ರಾಮದಲ್ಲಿ ಬೆಳೆಯಲು ಮುಂದಾಗಿದೆ. ಶಿರ್ವ ಗ್ರಾಮದ 10 ರೈತರ 7.5 ಹೆಕ್ಟೇರ್ ಭೂಮಿಯಲ್ಲಿ ಕಜೆ ಜಯ ಬಿತ್ತನೆ ವಾಡಲಾಗುತ್ತಿದ್ದು, 3 ಕ್ವಿಂಟಾಲ್ ಬೀಜವನ್ನು ವಿತರಿಸಿದೆ. ಅದು ಯಶಸ್ವಿಯಾದಲ್ಲಿ ಜಿಲ್ಲ್ಲೆಯ ಇತರ ಕಡೆಗೂ ಈ ತಳಿಯನ್ನು ವಿಸ್ತರಿಸುವ ಇರಾದೆಯನ್ನು ಹೊಂದಿದೆ.
ಕಾಪು ರೈತ ಸಂಪರ್ಕ ಕೇಂದ್ರದಲ್ಲಿ ಎಂಒ4 ತಳಿ ಭತ್ತದ ಬೀಜ ಹಾಗೂ ಜ್ಯೋತಿ ಬೀಜ ಲಭ್ಯವಿದೆ. 290 ಕ್ವಿಂಟಾಲ್ ಬೀಜ ದಾಸ್ತಾನಿರಿಸಲಾಗಿದ್ದು, ಈಗಾಗಲೇ 203 ಕ್ವಿಂಟಾಲ್ ಬೀಜ ವಾರಾಟವಾಗಿದೆ. ಕಳೆದ ವರ್ಷ ತಾಲೂಕಿನಲ್ಲಿ 2800 ಹೆಕ್ಟೇರ್ ಭತ್ತ ಬೇಸಾಯವಾಗಿದ್ದು., ಈ ವರ್ಷವೂ ಅಷ್ಟೇ ಭತ್ತ ಬೆಳೆಯುವ ಗುರಿ ಹೊಂದಲಾಗಿದೆ. ಪುಷ್ಪಲತಾ, ಕೃಷಿ ಅಧಿಕಾರಿ, ಕಾಪು