ಮೂಲ್ಕಿ: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಪ್ರತಿಭಾ ಅನ್ವೇಷಣೆ ಹಾಗೂ ವಿದ್ಯಾರ್ಥಿಗಳ ಸುಪ್ತ ಪ್ರತಿಭೆಯ ಉತ್ತೇಜನಕ್ಕೆ ಪ್ರತಿಭಾ ಕಾರಂಜಿ ಪೂರಕ ಎಂದು ಮೂಲ್ಕಿ ನಗರ ಪಂಚಾಯಿತಿ ಅಧ್ಯಕ್ಷ ಸತೀಶ್ ಅಂಚನ್ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮಂಗಳೂರು ಉತ್ತರ ವಲಯ, ಚಿತ್ರಾಪು ಕೆ.ಎಸ್.ರಾವ್ ಸ್ಮಾರಕ ಸರ್ಕಾರಿ ಪ್ರೌಢಶಾಲೆಯ ಸಂಯುಕ್ತ ಆಶ್ರಯದಲ್ಲಿ ಮೂಲ್ಕಿ ಹೋಬಳಿ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಪ್ರತಿಭಾ ಕಾರಂಜಿ 2024 ಅಧ್ಯಕ್ಷತೆ ವಹಿಸಿ ವಾತನಾಡಿದರು.
ಪಂಚಾಯಿತಿ ವಾರ್ಡ್ ಸದಸ್ಯೆ ರಾಧಿಕಾ ಯಾದವ ಕೋಟ್ಯಾನ್ ಉದ್ಘಾಟಿಸಿ ವಾತನಾಡಿ, ವಿದ್ಯಾರ್ಥಿಗಳ ಪ್ರತಿಭಾ ಪೋಷಣೆಗೆ ಮುಕ್ತ ಅವಕಾಶ ನೀಡುವುದರೊಂದಿಗೆ ನಶಿಸಿಹೋಗುವಂತಹ ಜನಪದ ಕಲೆಗಳ ಉಳಿವಿಗೆ ಪ್ರತಿಭಾ ಕಾರಂಜಿ ಪೂರಕ ಎಂದರು.
ಕಾರ್ಯಕ್ರಮ ಸಂಟಿಸಿದ್ದಕ್ಕೆ ಕ್ಷೇತ್ರದ ಸಮನ್ವಯಾಧಿಕಾರಿ ಶಾಲಾ ಮುಖ್ಯ ಶಿಕ್ಷಕರಿಗೆ ಅಭಿನಂದನಾ ಪತ್ರ ಹಸ್ತಾಂತರಿಸಿದರು.
ಮೂಲ್ಕಿ ನ.ಪಂ. ಸದಸ್ಯ ಯೋಗೀಶ್ ಕೋಟ್ಯಾನ್, ಪ್ರಗತಿಪರ ಕೃಷಿಕ ಬಾಲಚಂದ್ರ ಸನಿಲ್, ರಮೇಶ್ ಅಮೀನ್, ತುಷಾರ್, ಧನಪಾಲ್ ಪುತ್ರನ್, ಮಂಜುನಾಥ ಸನಿಲ್, ಕುವಾರಿ, ಹಿರಿಯ ವಿದ್ಯಾರ್ಥಿ ಸಂದ ಅಧ್ಯಕ್ಷ ನಿತೇಶ್ ಬಂಗೇರ, ಸುಜಾತಾ, ಎಸ್‌ಡಿಎಂಸಿ ಅಧ್ಯಕ್ಷೆ ಸಂಧ್ಯಾ, ಸವಿತಾ, ಬಿ.ವೀಣಾ, ರಾಮದಾಸ್, ವಿವಿಲಾ ಉಪಸ್ಥಿತರಿದ್ದರು.
ಕೆ.ಎಸ್.ರಾವ್ ಸ್ಮಾರಕ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕಿ ಶಾಂತಿ ಪೈ ಸ್ವಾಗತಿಸಿದರು. ಪ್ರಜ್ವಲ್ ಆರ್.ಕೋಟ್ಯಾನ್ ನಿರೂಪಿಸಿದರು.
ಸವಾಜದ ಜನರಲ್ಲಿ ಶಾಲಾಭಿವಾನ ಬೆಳೆಸುವಲ್ಲಿ ಪ್ರತಿಭಾ ಕಾರಂಜಿ ಸಹಕಾರಿ.ಸ್ಪರ್ಧೆಯು ಊರಿನಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿದೆ. ವಿದ್ಯಾರ್ಥಿಗಳಲ್ಲಿ ಆರೋಗ್ಯಕರ ಸ್ಪರ್ಧೆ ಏರ್ಪಡಿಸಿ ಪ್ರತಿಭಾ ಪ್ರದರ್ಶನಕ್ಕೆ ಮುಕ್ತ ಅವಕಾಶ ಕಲ್ಪಿಸುತ್ತದೆ. - ವೇದಾವತಿ, ಮಂಗಳೂರು ಉತ್ತರ ಕ್ಷೇತ್ರ ಸಮನ್ವಯ ಅಧಿಕಾರಿ.