ಗಣಿ ಸುರಕ್ಷಾ ಸಂಸ್ಥೆ ಕರ್ನಾಟಕ ವಲಯ-4 ಹಾಗೂ ಹಟ್ಟಿಚಿನ್ನದಗಣಿ ಕಂಪನಿ ಆಡಳಿತ ವರ್ಗದಿಂದ ಹಮ್ಮಿಕೊಂಡಿದ್ದ ಗಣಿ ಮಟ್ಟದ ಸುರಕ್ಷಾ ಸಪ್ತಾಹ ಕಾರ್ಯಕ್ರಮದಲ್ಲಿ ಹಟ್ಟಿಚಿನ್ನದಗಣಿ ಕಂಪನಿ ಕಾರ್ಯನಿರ್ವಾಹಕ ನಿರ್ದೇಶಕ ಪ್ರಕಾಶ್ ಉದ್ಘಾಟಿಸಿದರು. ಬಿಪುಲ್ ಬಿಹಾರಿ ಶೆಟಿಯಾರ್, ನಾಗೇಂದ್ರ ಕುಮಾರ್ ಶ್ರೀರಾಮ, ಹನುಮಂತಪ್ಪ ನೀರಮಾನ್ವಿ, ಟಿ.ರವಿಕುಮಾರ್, ಎಸ್.ಎಂ ಶಫಿ, ಅರುಣವ್ ಘೋಷ್, ಪಿ.ಸುರೇಶ್ ಇದ್ದರು. 
ಜಿಲ್ಲೆ

ಸಂಭವನೀಯ ಅವಘಡ ತಡೆಗೆ ಸೂಕ್ತ ಕ್ರಮ

Kopala - Desk - Eraveni

ಹಟ್ಟಿಚಿನ್ನದಗಣಿ: ಅವಘಡ ತಡೆಯುವದರ ಜತೆಗೆ ಅವಘಡ ಸಂಭವಿಸುವ ಸಂದರ್ಭಗಳನ್ನು ಅಧ್ಯಯನ ಮಾಡಿ ಸಂಭವನೀಯ ಅವಘಡ ತಡೆಗಟ್ಟಲು ಕಂಪನಿ ಆಡಳಿತ ವರ್ಗ ಕ್ರಮಕೈಗೊಂಡ ಪರಿಣಾಮ ಇಂದು ಕಾರ್ಮಿಕರು ಸುರಕ್ಷತೆಯಿಂದಿದ್ದಾರೆಂದು ಹಟ್ಟಿಚಿನ್ನದಗಣಿ ಕಂಪನಿ ಕಾರ್ಯನಿರ್ವಾಹಕ ನಿರ್ದೇಶಕ ಪ್ರಕಾಶ್ ಹೇಳಿದರು.

ಗಣಿ ಸುರಕ್ಷಾ ಸಂಸ್ಥೆ ಕರ್ನಾಟಕ ವಲಯ-4 ಹಾಗೂ ಹಟ್ಟಿಚಿನ್ನದಗಣಿ ಕಂಪನಿ ಆಡಳಿತ ವರ್ಗದಿಂದ ಹಮ್ಮಿಕೊಂಡಿದ್ದ ಗಣಿ ಮಟ್ಟದ ಸುರಕ್ಷಾ ಸಪ್ತಾಹ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು.

ಹೊಸ ವೃತ್ತಾಕಾರದ ಶಾಫ್ಟಿನ ಕೆಳ ಹಂತಗಳಲ್ಲಿ ಧೂಳು ಹಾಗೂ ಗಾಳಿಯ ಸಮಸ್ಯೆ ಇರುವುದನ್ನು ಗುರುತಿಸಿ ಗಾಳಿ ಸರಬರಾಜು ಹಾಗೂ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ. ಗುತ್ತಿಗೆ ನೌಕರರಿಗೂ ಸಂಭವಿಸಿದ ಅವಘಡಗಳನ್ನು ಸಹಿತ ಖಾಯಂ ನೌಕರರಿಗೆ ಉಪಚರಿಸುವ ರೀತಿಯಲ್ಲಿ ಕ್ರಮಕೈಗೊಳ್ಳಲಾಗಿದೆ.

ಅವಘಡಗಳು ಶೂನ್ಯ ಹಂತ ತಲುಪಿದ್ದರು ಸಣ್ಣ-ಪುಟ್ಟ 16 ಅವಘಡಗಳು ಆಧಿಕಾರಿ ವರ್ಗ ಹಾಗೂ ಉನ್ನತ ಶ್ರೇಣಿಯ ನೌಕರರಲ್ಲಿ ಕಂಡು ಬಂದಿವೆ. ಕಾರ್ಮಿಕರಲ್ಲಿ ಕೇವಲ 5 ಸಣ್ಣಪುಟ್ಟ ಅವಘಡಗಳು ಸಂಭವಿಸಿರುವುದು ನೋಡಿದರೆ ಕಾರ್ಮಿಕರು ಅನುಸರಿಸುತ್ತಿರುವ ಸುರಕ್ಷಾ ಕ್ರಮಗಳನ್ನು ಅಧಿಕಾರಿ ವರ್ಗ ಪಾಲಿಸುತ್ತಿಲ್ಲವೆಂಬುದು ಗೋಚರಿಸುತ್ತಿದ್ದು, ಸುರಕ್ಷತೆ ಹೇಳಿ ಕೊಡಬೇಕಾದ ಮೇಲು ಹಂತದ ಸಿಬ್ಬಂದಿಗಳು ಎಚ್ಚರದಿಂದ ಕಾರ್ಯ ನಿರ್ವಹಿಸಬೇಕೆಂದು ಎಚ್ಚರಿಸಿದರು.

ಬಳ್ಳಾರಿ ವಲಯದ ಗಣಿ ಸುರಕ್ಷಾ ನಿರ್ದೇಶಕ ಬಿಪುಲ್ ಬಿಹಾರಿ ಶೆಟಿಯಾರ್, ಸಿಬ್ಬಂದಿ ಹಾಗೂ ಕಾರ್ಮಿಕ ಸಂಘದ ಅಧ್ಯಕ್ಷ ಎಸ್.ಎಂ ಶಫಿ, ಬಳ್ಳಾರಿ ವಲಯದ ಗಣಿ ಸುರಕ್ಷಾ ಉಪನಿರ್ದೇಶಕ ನಾಗೇಂದ್ರ ಕುಮಾರ್ ಶ್ರೀರಾಮ,

ಕಂಪನಿ ಸಮನ್ವಯ ವಿಭಾಗದ ಪ್ರಧಾನ ವ್ಯವಸ್ಥಾಪಕ ಹನುಮಂತಪ್ಪ ನೀರಮಾನ್ವಿ, ಏಜೆಂಟ್ ಹಾಗೂ ತಾಂತ್ರಿಕ ವಿಭಾಗದ ಪ್ರಧಾನ ವ್ಯವಸ್ಥಾಪಕ ಟಿ.ರವಿಕುಮಾರ್, ಗಣಿ ಉಪಪ್ರಧಾನ ವ್ಯವಸ್ಥಾಪಕರುಗಳಾದ ಅರುಣವ್ ಘೋಷ್, ಪಿ.ಸುರೇಶ್, ಅಧಿಕಾರಿ ಟಿ. ಜಗದೀಶ್,

ಮಾನವ ಸಂಪನ್ಮೂಲ ವಿಭಾಗದ ಹಿರಿಯ ವ್ಯವಸ್ಥಾಪಕ ಯಮನೂರಪ್ಪ, ಗಣಿ ಆಸ್ಪತ್ರೆ ವೈದ್ಯಕೀಯ ಅಧಿಕ್ಷಕ ವಸಂತಕುಮಾರ್ ಕುಮಾರ್, ವೈ.ಹುಡೇದಮನಿ, ಕಾರ್ಮಿಕ ಆಂಜನೇಯ ರೆಡ್ಡಿ ಇದ್ದರು. ವಿವಿಧ ಸ್ಫರ್ಧೇಗಳಲ್ಲಿ ವಿಜೇತರಾದ ಸಿಬ್ಬಂದಿ ಹಾಗೂ ಕಾರ್ಮಿಕರಿಗೆ ಪ್ರಶಸ್ತಿ ವಿತರಿಸಲಾಯಿತು.