ನರಸಿಂಹ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀ ಪಾದರು ಆಶೀರ್ವಚನ ನೀಡಿದರು.  
ಜಿಲ್ಲೆ

ಕ್ಷೇತ್ರ ದರ್ಶನದಿಂದ ಸಕಾರಾತ್ಮಕ ಚಿಂತನೆ ಜಾಗೃತಿ

Karthika K.S

ಹೆಬ್ರಿ: ದೇವಾಲಯಗಳು ನಮ್ಮ ಧಾರ್ಮಿಕ ಆಚರಣೆಗಳ ಜತೆಗೆ ಸಂಸ್ಕೃತಿ ಮತ್ತು ಸಂಸ್ಕಾರ ತಿಳಿಸುವ ಆಧ್ಯಾತ್ಮಿಕ ಕ್ಷೇತ್ರ. ಕ್ಷೇತ್ರ ದರ್ಶನದಿಂದ ನಮ್ಮಲ್ಲಿ ಸಕಾರಾತ್ಮಕ ಚಿಂತನೆ ಜಾಗೃತಗೊಳ್ಳುತ್ತವೆ ಎಂದು ಸುಬ್ರಹ್ಮಣ್ಯ ಸಂಪುಟ ನರಸಿಂಹ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ಹೇಳಿದರು.

ಎಳ್ಳಾರೆ ಲಕ್ಷ್ಮೀ ಜನಾರ್ದನ ದೇವಸ್ಥಾನದ ನೂತನ ಮತ್ತು ಶಾಸ್ತ್ರೀಯ ಧ್ವಜಸ್ತಂಭ ಪ್ರತಿಷ್ಠಾಪನೆ ಮತ್ತು ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.

ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಯೋಗಿಶ್ ಮಲ್ಯ ಅಧ್ಯಕ್ಷತೆ ವಹಿಸಿದ್ದರು. ದೇವಳದ ಜೀರ್ಣೋದ್ಧಾರ ಕಾರ್ಯಕ್ಕೆ ಕೊಡುಗೆ ನೀಡಿದ ದಾನಿಗಳನ್ನು ಗೌರವಿಸಲಾಯಿತು. ಕುಕ್ಕಿಕಟ್ಟೆ ರಾಮಕೃಷ್ಣ ತಂತ್ರಿ, ಸಿಎ ಅಶೋಕ ಕುಮಾರ್ ಮುಳ್ಕಾಡು, ಚಂದ್ರಕಲಾ ನಾಯಕ್ ಉಪಸ್ಥಿತರಿದ್ದರು. ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಯೋಗಿಶ್ ಮಲ್ಯ ಅಧ್ಯಕ್ಷತೆ ವಹಿಸಿದ್ದರು. ದೇವಳ ಜೀರ್ಣೋದ್ಧಾರ ಕಾರ್ಯಕ್ಕೆ ಕೊಡುಗೆ ನೀಡಿದ ದಾನಿಗಳನ್ನು ಗೌರವಿಸಲಾಯಿತು. ರಾಮಚಂದ್ರ ನಾಯಕ್ ಸ್ವಾಗತಿಸಿದರು. ಕುಕ್ಕುಜೆ ವಿನಯ ಆರ್. ಭಟ್ ನಿರೂಪಿಸಿದರು. ಗುರುಪ್ರಸಾದ್ ಕಿಣಿ, ಪ್ರಕಾಶ್ ಸಹಕರಿಸಿದರು.