ಆರ್ಡಿ: ಪ್ರಕೃತಿದತ್ತ ಆಹಾರ ಪದಾರ್ಥಗಳು ಜನರ ಆರೋಗ್ಯವನ್ನು ಸುರಕ್ಷಿತವಾಗಿ ಕಾಪಾಡುತ್ತದೆ. ರಾಸಾಯಮಿಕ ಮಿಶ್ರಿತ ಹಾನಿಕಾರಕ ಆಹಾರ ಪದಾರ್ಥಗಳು ಮನುಷ್ಯರ ಆರೋಗ್ಯ ಹಾಳು ಮಾಡುವುದರೊಂದಿಗೆ ಆಯುಷ್ಯ ಕುಂಠಿತಗೊಳಿಸುತ್ತದೆ ಎಂದು ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್.ಜಯರಾಮ ಶೆಟ್ಟಿ ಸುರ‌್ಗೋಳಿ ಹೇಳಿದರು.
ಆರ್ಡಿ ಸಮುಧಾಯ ಭವನದಲ್ಲಿ ಆರ್ಡಿ ಅಂಗನವಾಡಿ ಕೇಂದ್ರದ ನೇತೃತ್ವದಲ್ಲಿ ಅಂಗನವಾಡಿ ಬೆಳ್ವೆ ವಲಯದ ಪೋಷಣ್ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಂಗಳವಾರ ಮಾತನಾಡಿದರು. ಕುಂದಾಪುರ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಾಗೇಶ್ ಕೋಟ್ಯಾನ್ ಅಧ್ಯಕ್ಷತೆ ವಹಿಸಿದರು.
ಬೆಳ್ವೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರಾಜೇಶ್ವರಿ ಎ.ಜಿ., ಆರ್ಡಿ ಬೆಳ್ವೆ ಗೋಳಿಯಂಗಡಿ ಲಯನ್ಸ್ ಕ್ಲಬ್ ಉಪಾಧ್ಯಕ್ಷ ಬಾಬು ಶೆಟ್ಟಿ ಜಗ್ಲುಗುಡ್ಡೆ, ಟೀಮ್ ಮಲೆನಾಡು ಹ್ಯುಮಾನಿಟೆರಿಯನ್ ಚಾರಿಟೆಬಲ್ ಟ್ರಸ್ಟ್ ಬೆಳ್ವೆ ಅಧ್ಯಕ್ಷ ಮುಸ್ತಾಕ್ ಅಹಮ್ಮದ್ ಬೆಳ್ವೆ, ಮೀರಾ ಪ್ರಶಾಂತ ಶೆಟ್ಟಿ ಆರ್ಡಿ, ಪತ್ರಕರ್ತ ಕೆ.ಸಂಜೀವ ಆರ್ಡಿ, ಆರ್ಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಯಶೋದಾ, ಆರ್ಡಿ ಚಾರಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಸರ್ಕಾರಿ ಪ್ರೌಢಶಾಲೆ ದೈಹಿಕ ಶಿಕ್ಷಣ ಶಿಕ್ಷಕಿ ಹೇಮಲತಾ ಹೆಗ್ಡೆ, ಅಂಗನವಾಡಿ ಬೆಳ್ವೆ ವಲಯ ಮೇಲ್ವಿಚಾರಕಿ ರೇವತಿ, ಆರ್ಡಿ ಅಂಗನವಾಡಿ ಬಾಲ ವಿಕಾಸ ಸಮಿತಿ ಅಧ್ಯಕ್ಷೆ ರಕ್ಷಿತಾ ಸರ್ಜಿತ್ ಶೆಟ್ಟಿ ಉಪಸ್ಥಿತರಿದ್ದರು.
ಅಂಗನವಾಡಿ ಬೆಳ್ವೆ ವಲಯ ಮೇಲ್ವಿಚಾರಕಿ ರೇವತಿ ಸ್ವಾಗತಿಸಿ, ಸುದರ್ಶನ್ ಶೆಟ್ಟಿ ಆರ್ಡಿ ಕಾರ್ಯಕ್ರಮ ನಿರೂಪಿಸಿದರು. ಆರ್ಡಿ ಅಂಗನವಾಡಿ ಕಾರ್ಯಕರ್ತೆ ಪಾರ್ವತಿ ವಂದಿಸಿದರು.
ಬೆಳ್ವೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರಾಜೇಶ್ವರಿ ಎ.ಜಿ. ಅವರು ಆರೋಗ್ಯ ಹಾಗೂ ಆಹಾರ ಪದ್ದತಿ ಬಗ್ಗೆ ಮಾಹಿತಿ ನೀಡಿದರು. ಸೀಮಂತ ಕಾರ್ಯಕ್ರಮ, ಹಸಿರು ಸೊಪ್ಪುಗಳು, ತರಕಾರಿ, ಬೇಳೆ ಕಾಳುಗಳು, ಪೌಷ್ಟಿಕಾಂಶ ಆಹಾರ ಪದಾರ್ಥಗಳ ತಿಂಡಿ ತಿನಿಸುಗಳ ಪ್ರದರ್ಶನ, ಬೆಳ್ವೆ ಪ್ರಾಥಮಿಕ ಆರೋಗ್ಯ ಕೇಂದ್ರ ವತಿಯಿಂದ ರಕ್ತದೊತ್ತಡ, ಮಧುಮೇಹ ತಪಾಸಣೆ ನಡೆಯಿತು.