ಕೊಟ್ಟೂರಿನಿಂದ ವರ್ಗಾವಣೆಗೊಂಡ ತಹಸೀಲ್ದಾರ್ ಎಂ. ಕುಮಾರಸ್ವಾಮಿ ಬೀಳ್ಕೊಡುಗೆ ಸಮಾರಂಭದಲ್ಲಿ ಬುಧವಾರ ಮಾತನಾಡಿದರು. ಪ್ರಭಾರಿ ತಹಸೀಲ್ದಾರ್ ಅಮರೀಶ ಜಾಲಹಳ್ಳಿ, ಪಪಂ ಮುಖ್ಯಾಧಿಕಾರಿ ನಸುರಲ್ಲಾ ಇದ್ದರು. 
ಜಿಲ್ಲೆ

ಬಡವರಿಗೆ ಉತ್ತಮ ಸೇವೆ ಒದಗಿಸಿದ ತೃಪ್ತಿಯಿದೆ: ತಹಸೀಲ್ದಾರ್ ಎಂ. ಕುಮಾರಸ್ವಾಮಿ ಅನಿಸಿಕೆ

Gangavati - Desk - Veeresh S Ullagaddi

ಕೊಟ್ಟೂರು: ಎರಡು ವರ್ಷದಲ್ಲಿ ನಿರ್ಗತಿಕ, ಅಸಹಾಯಕರಿಗೆ ಉತ್ತಮ ಸೇವೆ ಒದಗಿಸಿದ್ದೇನೆ ಎಂಬ ತೃಪ್ತಿಯಿದೆ ಎಂದು ಕಾರಟಗಿಗೆ ವರ್ಗಾವಣೆಗೊಂಡ ತಹಸೀಲ್ದಾರ್ ಎಂ. ಕುಮಾರಸ್ವಾಮಿ ಹೇಳಿದರು.


ಪಟ್ಟಣದ ತಹಸಿಲ್ ಕಚೇರಿಯ ಮಹಾತ್ಮ ಗಾಂಧೀಜಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ಸರ್ಕಾರ ಯೋಜನೆಗಳ ಅನುಷ್ಠಾನ, ಆನ್ ಲೈನ್ ಸೇವೆ, ಸಾರ್ವಜನಿಕರ ಸಮಸ್ಯೆ ಸ್ಪಂದನೆಗೆ ಜಿಲ್ಲೆಯಲ್ಲಿ ಕೊಟ್ಟೂರು ಪ್ರಥಮ ಸ್ಥಾನದಲ್ಲಿದೆ.

ತಾಲೂಕಿನಲ್ಲಿ ಖಾಸಗಿ ಒಡೆತನದಲ್ಲಿದ್ದ 35 ಎಕರೆ ಸರ್ಕಾರಿ ಭೂಮಿಯನ್ನು ಕಂದಾಯ ಇಲಾಖೆಗೆ ಸೇರ್ಪಡೆಗೊಳಿಸಿದ್ದೇನೆ ಎಂದರು. ಕೊಟ್ಟೂರು ಪ್ರಭಾರಿ ತಹಸೀಲ್ದಾರ್ ಅಮರೀಶ ಜಾಲಹಳ್ಳಿ, ವರ್ಗಾವಣೆಗೊಂಡ ತಹಸೀಲ್ದಾರ್ ಎಂ. ಕುಮಾರಸ್ವಾಮಿ, ಪಪಂ ಮುಖ್ಯಾಧಿಕಾರಿ ನಸರುಲ್ಲಾ ಇತರರಿದ್ದರು.