ಸಂಡೂರು ತಾಲೂಕಿನ ಆಕಾಶ್‌ನಗರ ಕ್ಯಾಂಪ್‌ನಲ್ಲಿ ಡಿವೈಎಫ್‌ಐ ಹಾಗೂ ಡಿಎಚ್‌ಎಸ್ ಸಂಘಟನೆಗಳ ನೇತೃತ್ವದಲ್ಲಿ ನಿವೇಶನದ ಹಕ್ಕುಪತ್ರ ಹೊಂದಿರದ ನಾಗರಿಕರ ಸಭೆ ನಡೆಯಿತು. ಡಿವೈಎಫ್‌ಐ ತಾಲೂಕು ಕಾರ್ಯದರ್ಶಿ ನಾಗಭೂಷಣ, ಜಿಲ್ಲಾ ಕಾರ್ಯದರ್ಶಿ ಎಚ್.ಸ್ವಾಮಿ, ವಿಮುಕ್ತ ದೇವದಾಸಿ ಮಹಿಳೆ ವಿಮೋಚನ ಜಿಲ್ಲಾ ಸಂಘದ ಎ.ಸ್ವಾಮಿ, ತಾಳೂರು ಗ್ರಾಮ ಘಟಕ ಅಧ್ಯಕ್ಷ ಸೈಯದ್ ಷರೀಫ ಇತರರಿದ್ದರು. 
ಜಿಲ್ಲೆ

ಬಡ ಕುಟುಂಬಗಳಿಗೆ ಹಕ್ಕುಪತ್ರ ವಿತರಣೆಗಾಗಿ ಸಭೆ

Kopala - Desk - Eraveni

ಸಂಡೂರು: ತಾಲೂಕಿನ ಆಕಾಶ್‌ನಗರ ಕ್ಯಾಂಪ್ ಸೇರಿ ಮೂರು ಭಾಗಗಳಲ್ಲಿ ವಾಸವಿರುವ ಬಡ ಕುಟುಂಬಗಳಿಗೆ ಹಕ್ಕುಪತ್ರ ವಿತರಣೆಗಾಗಿ ಮೊದಲ ಬಾರಿ ಸಭೆ ಮಾಡಲಾಗಿದ್ದು ಮುಂದೆ ಇದೇ ಕುಟುಂಬಗಳೊಂದಿಗೆ ಸಭೆ ನಡೆಸುವ ಮೂಲಕ ಹೋರಾಟ ಮಾಡಬೇಕಿದೆ ಎಂದು ಡಿವೈಎಫ್‌ಐ ಕಾರ್ಯದರ್ಶಿ ನಾಗಭೂಷಣ ಹೇಳಿದರು.

ಆಕಾಶನಗರ ಕ್ಯಾಂಪಿನ ಮಾರೆಮ್ಮ ದೇವಸ್ಥಾನದ ಆವರಣದಲ್ಲಿ ಡಿವೈಎಫ್‌ಐ ಮತ್ತು ಡಿಎಚ್‌ಎಸ್ ಸಂಘಟನೆಗಳು ಹಮ್ಮಿಕೊಂಡಿದ್ದ ನಿವೇಶನ ರಹಿತರ ಸಭೆಯಲ್ಲಿ ಸೋಮವಾರ ಮಾತನಾಡಿದರು.

ವಿಮುಕ್ತ ದೇವದಾಸಿ ಮಹಿಳೆ ವಿಮೋಚನ ಸಂಘದ ಜಿಲ್ಲಾ ಮುಖಂಡ ಎ.ಸ್ವಾಮಿ, ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಎಚ್.ಸ್ವಾಮಿ, ತಾಲೂಕು ಅಧ್ಯಕ್ಷ ಸೈಯದ್ ಷರೀಫ್, ಮುಖಂಡರಾದ ಖಲಂದರ್, ಚಂದ್ರಾನಾಯ್ಕ, ಹೊನ್ನೂರುಸ್ವಾಮಿ, ಮನೋಜ್ ಕುಮಾರ್, ಕಾರ್ತಿಕ ಸ್ವಾಮಿ, ಗುರು, ರಾಜು, ಹುಲಿಗಮ್ಮ, ಗಂಗಮ್ಮ, ಯಲ್ಲಮ್ಮ ಇತರರಿದ್ದರು.