ಹಗರಿಬೊಮ್ಮನಹಳ್ಳಿ ತಾಲೂಕಿನ ಹರೇಗೊಂಡನಹಳ್ಳಿಯಲ್ಲಿ ಬಸವೇಶ್ವರ ದೇವಸ್ಥಾನದ ಗೋಪುರ ಉದ್ಘಾಟನೆ ಹಾಗೂ ಕಲಶಾರೋಹಣ ಕಾರ್ಯಕ್ರಮದಲ್ಲಿ ಉಜ್ಜಿನಿ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು ಆಶೀರ್ವಚನ ನೀಡಿದರು. ಮರಿಯಮ್ಮನಹಳ್ಳಿ ಮಲ್ಲಿಕಾರ್ಜುನ ಶಿವಾಚಾರ್ಯರು, ಶ್ರೀ ಹಾಲಸಿದ್ಧೇಶ್ವರ ಸ್ವಾಮೀಜಿ ಇತರರಿದ್ದರು. 
ಜಿಲ್ಲೆ

ಜಾತಿಯತೆಯಿಂದ ಸಮಾಜದಲ್ಲಿ ಕಲುಷಿತ ವಾತಾವರಣ

ಗಾಯತ್ರಿ ಮಾಲಿಪಾಟೀಲ್

ಹಗರಿಬೊಮ್ಮನಹಳ್ಳಿ: ಜಾತಿಯತೆ ಬಿಟ್ಟು ಸಾಮರಸ್ಯದಿಂದ ಜೀವನ ನಡೆಸಬೇಕೆಂದು ಉಜ್ಜಿನಿ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು ಹೇಳಿದರು.

ಹರೇಗೊಂಡನಹಳ್ಳಿಯಲ್ಲಿ ಬುಧವಾರ ಆಯೋಜಿಸಿದ್ದ ಶ್ರೀ ಬಸವೇಶ್ವರ ಸ್ವಾಮಿ ದೇವಾಲಯದ ಗೋಪುರ ಉದ್ಘಾಟನೆ ಹಾಗೂ ಕಲಶಾರೋಹಣ ಕಾರ್ಯಕ್ರಮದಲ್ಲಿ ಮಾತನಾಡಿದರು. ಗ್ರಾಮೀಣ ಪ್ರದೇಶದಲ್ಲಿ ಜನರು ರಾಜಕೀಯ ಬಿಟ್ಟು ಸಹೋದರರಂತೆ ಬದುಕಬೇಕು. ಜಾತಿಯತೆಯಿಂದ ಮನಸ್ತಾಪ ಉಂಟಾಗಿ ಸಮಾಜ ಕಲುಷಿತವಾಗುತ್ತದೆ. ಕಲಹ ಒಳ್ಳೆಯ ಬೆಳವಣಿಗೆ ಅಲ್ಲ. ಪರಸ್ಪರ ಪ್ರೀತಿ, ವಿಶ್ವಾಸದಿಂದಯಿದ್ದರೆ ಸಮಾಜದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತವೆ ಎಂದರು.

ಪಟ್ಟಣದ ಶ್ರೀ ಹಾಲಸ್ವಾಮಿ ಮಠದ ಹಾಲಸಿದ್ಧೇಶ್ವರ ಸ್ವಾಮೀಜಿ ಮಾತನಾಡಿ, ಜೀವನದಲ್ಲಿ ಕಷ್ಟ-ಕಾರ್ಪಣ್ಯಗಳು ಬಂದಾಗ ಪವಾಡದಂತೆ ಪರಿಹಾರವಾದರೆ ಅಲ್ಲಿ ನಂಬಿಕೆ, ದೇವರು ಹಾಗೂ ಹಿರಿಯರ ಆಶೀರ್ವಾದ ಇರಲು ಸಾಧ್ಯ ಎಂದು ತಿಳಿಸಿದರು. ಕುಂಭ, ಕಳಸ, ವಿವಿಧ ವಾದ್ಯ ಮೇಳದೊಂದಿಗೆ ಕಲಶ ಹಾಗೂ ಜಗದ್ಗುರುಗಳನ್ನು ಮೆರವಣಿಗೆ ಮೂಲಕ ಕರೆತರಲಾಯಿತು. ನಂತರ ಶ್ರೀ ಬಸವೇಶ್ವರ ದೇವಸ್ಥಾನದ ಗೋಪುರ ಉದ್ಘಾಟನೆ ಹಾಗೂ ಕಲಶಾರೋಹಣ ಕಾರ್ಯಕ್ರಮ ನೆರವೇರಿತು.

ಗೋಪುರ ದಾನಿ ನೀಲಕಂಠಪ್ಪ, ಮರಿಯಮ್ಮನಹಳ್ಳಿ ಮಲ್ಲಿಕಾರ್ಜುನ ಸ್ವಾಮೀಜಿ, ಪ್ರಮುಖರಾದ ಎಂ.ಜಿ.ಗೀತಪ್ಪ, ಹುಡೇದ್ ಹುಲಗಪ್ಪ, ಡಿ.ಉಮಾಶಂಕರ, ಆರ್.ಕೊಟ್ರೇಶ, ಎಚ್.ಎಂ.ಹೇಮಯ್ಯ, ಎಚ್.ಎಚ್.ನಾಗಪ್ಪ, ಕನ್ನಿಹಳ್ಳಿ ಕೊಟ್ರೇಶ, ಮೆಟ್ರಿ ನಾಗರಾಜ, ಕೆ.ಸಿದ್ದು, ಗುರುಬಸನಗೌಡ, ಜಿ.ತಿಂದಪ್ಪ, ಕೆ.ನಾಗರಾಜಗೌಡ, ಟಿಪುಡಿ ಸಿದ್ದಪ್ಪ, ಲಾಟರಿ ಕರಿಯಪ್ಪ, ಕರಿಬಸಪ್ಪ, ತಳವಾರ ಹನುಮೇಶ ಇತರರಿದ್ದರು.