ಕಾರವಾರ: ಪ್ರಸ್ತುತ ವಿದ್ಯಮಾನಗಳಿಗೆ ತಕ್ಕಂತೆ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯ ತರಬೇತಿ (Police Training) ಯಲ್ಲಿ ಆಮೂಲಾಗ್ರ ಬದಲಾವಣೆಗಳನ್ನು ತರಲಾಗುತ್ತಿದೆ ಎಂದು ಕರ್ನಾಟಕ ಪೊಲೀಸ್ ತರಬೇತಿ ವಿಭಾಗದ ಎಡಿಜಿಪಿ ಅಲೋಕ ಕುಮಾರ್ ತಿಳಿಸಿದರು.
ಕಾರವಾರದಲ್ಲಿ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆ ವೀಕ್ಷಿಸಿದ ನಂತರ ಅವರು ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದರು. ಕಾಯ್ದೆಗಳು ಬದಲಾಗಿವೆ. ಅಪರಾಧದ ಸ್ವರೂಪಗಳೂ ಬದಲಾಗಿವೆ. ವಿಧಿ ವಿಜ್ಞಾನ ತಂತ್ರಜ್ಞಾನಗಳು ವೇಗವಾಗಿ ಅಭಿವೃದ್ಧಿ ಹೊಂದುತ್ತಿವೆ. ಅದಕ್ಕೆ ಅನುಕೂಲವಾಗುವಂತೆ ಅಪ್‌ಡೇಟ್ ಆಗಲು ನಾವು ವಿವಿಧ ಕ್ರಮ ವಹಿಸಿದ್ದೇವೆ ಎಂದರು.
ಜರ್ಮನಿ ಮಾದರಿಯಲ್ಲಿ ಪರಿಸ್ಥಿತಿ ಆಧಾರಿತ ತರಬೇತಿಯನ್ನು (Police Training) ನೀಡಲಾಗುತ್ತಿದೆ. ತರಬೇತಿ ಅವಧಿಯಲ್ಲಿ ಕೇವಲ ಪಾಠದ ಬದಲು ಗುಂಪು ಚರ್ಚೆ, ಪ್ರಾಯೋಗಿಕ ತರಬೇತಿ ಹೆಚ್ಚಿಸಿದ್ದೇವೆ. ಪ್ರತಿ ಹುದ್ದೆಗಳ ಜವಾಬ್ದಾರಿಯನ್ನು ತಿಳಿಸಿಕೊಡಲಾಗುತ್ತಿದೆ. ಡಿಎಸ್‌ಪಿಗಳ ತರಬೇತಿ ಅವಽಯನ್ನು 10 ತಿಂಗಳಿಂದ 1 ವರ್ಷಕ್ಕೆ, ಕಾನ್ಸ್ಟೇಬಲ್‌ಗಳ ತರಬೇತಿಯ ಅವಧಿಯನ್ನು 9 ರಿಂದ 10 ತಿಂಗಳಿಗೆ ಹೆಚ್ಚಿಸಲಾಗಿದೆ. ಡಿಎಸ್‌ಪಿ ತರಬೇತಿಯಲ್ಲಿ ಮಾತ್ರ ನೀಡಲಾಗುತ್ತಿದ್ದ ಸ್ಯಾಂಡ್‌ವಿಚ್ ಕೋರ್ಸ್ನ್ನು ಈಗ ಪಿಎಸ್‌ಐ ಹಾಗೂ ಕಾನ್ಸ್ಟೇಬಲ್ ತರಬೇತಿಗಳಲ್ಲೂ ಅಳವಡಿಸಿಕೊಳ್ಳಲಾಗಿದೆ. ಶಿಬಿರಾರ್ಥಿಗಳು ಅರ್ಧ ತರಬೇತಿಯ ನಂತರ ತಾವು ಕಾರ್ಯ ನಿರ್ವಹಿಸುವ ಘಟಕಗಳಿಗೆ ತೆರಳಿ ತರಬೇತಿಯಲ್ಲಿ ಹೇಳಿಕೊಡುವ ಅಂಶಗಳ ಪ್ರಾಯೋಗಿಕವಾಗಿ ವೀಕ್ಷಿಸಲು ಅನುವು ಮಾಡಿಕೊಡಲಾಗುತ್ತಿದೆ ಎಂದರು.
Police Training ಗಾಗಿ ಇನೋಸಿಸ್ ನೆರವಿನಲ್ಲಿ ಸೈಬರ್ ಲ್ಯಾಬ್
ಕಾರವಾರದಲ್ಲಿ Police Training
ಈ ವರ್ಷ 50 ಸಾವಿರಕ್ಕೂ ಅಧಿಕ ಸಶಸ್ತ್ರ ಪೊಲೀಸ್ ಸಿಬ್ಬಂದಿ ನೇಮಕವಾಗಿದೆ. 1300 ಸಿವಿಲ್ ಕಾನ್ಸಟೇಬಲ್‌ಗಳ ನೇಮಕಾತಿಯಾಗಿದೆ. 500 ಪಿಎಸ್‌ಐಗಳ ನೇಮಕವಾಗಿದೆ. ಈಗಾಗಲೇ ಪೊಲೀಸ್ ತರಬೇತಿ ಶಾಲೆಗಳಲ್ಲಿ ತರಬೇತಿ ನಿರತರ ಸಂಖ್ಯೆ ಭರ್ತಿಯಾಗಿದೆ. ಹಾಗಾಗಿ ಕಾರವಾರದಲ್ಲಿರುವ ತಾತ್ಕಾಲಿಕ ತರಬೇತಿ ಶಾಲೆಯಲ್ಲಿ ಒಂದು ಬ್ಯಾಚ್‌ಗೆ ತರಬೇತಿ ಪ್ರಾರಂಭಿಸುವ ಯೋಜನೆ ಹೊಂದಿದ್ದು, ಹಾಗಾಗಿ ಮೂಲ ಸೌಕರ್ಯ ಪರಿಶೀಲಿಸುವ ಸಲುವಾಗಿ ಆಗಮಿಸಿದ್ದೇನೆ ಎಂದು ಅಲೋಕ್ ಕುಮಾರ್ ತಿಳಿಸಿದರು.ಇದನ್ನೂ ಓದಿ: https://www.vijayavani.net/wild-animals-at-amadallihttps://www.facebook.com/share/p/19gPQ59VPM/